ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತದ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಫ್ಲಿಪ್ ಕಾರ್ಟ್ನ ಹೈಪರ್ -ವ್ಯಾಲ್ಯೂ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಆಗಿರುವ ಶಾಪ್ಸಿ Shopsy ಇಂದು ತನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಸಾರಾ ಆಲಿ ಖಾನ್ ನಟಿಸಿರುವ ಹೊಸ ಜಾಹೀರಾತು ಅಭಿಯಾನವನ್ನು ಆರಂಭಿಸಿದೆ.
ಈ ಪ್ಲಾಟ್ ಫಾರ್ಮ್ನಲ್ಲಿ ಕೈಗೆಟುಕುವ ದರ ಮತ್ತು ವಿಸ್ತರಿತ ಉತ್ಪನ್ನ ಶ್ರೇಣಿಯ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಭಾರತೀಯ ಕುಟುಂಬಗಳಲ್ಲಿ ತಮ್ಮ ಮಕ್ಕಳು ಶಾಪಿಂಗ್ಗೆ ಹೆಚ್ಚು ಹಣವನ್ನು ಖರ್ಚು ಮಾಡಿದ ಸಂದರ್ಭದಲ್ಲಿ ಪೋಷಕರು ಕಿರಿಕಿರಿಗೆ ಒಳಗಾಗುತ್ತಾರೆ. ಇದರಿಂದ ಹೊರಬರುವುದು ಹೇಗೆ ಎಂಬ ಒಳನೋಟವನ್ನು ಬಿಂಬಿಸುವ ಆಧಾರದಲ್ಲಿ ಈ ಟಿವಿಸಿಯನ್ನು ಸಿದ್ಧಪಡಿಸಲಾಗಿದೆ. ಕುರ್ತಿಸ್, ಸೀರೆಗಳು, ಕೈಗಡಿಯಾರಗಳು ಮತ್ತು ಗೃಹೋಪಯೋಗಿ ಉತ್ಪನ್ನಗಳಂತಹ ಅನೇಕ ವರ್ಗಗಳ ಉತ್ಪನ್ನಗಳು ನಿಮಗೆ ಹೆಚ್ಚಿನ ಮೌಲ್ಯವನ್ನು ನೀಡುತ್ತವೆ ಎಂಬುದನ್ನು ಈ ಅಭಿಯಾನದಲ್ಲಿ ತೋರಿಸಿಕೊಡಲಾಗುತ್ತದೆ
ಈ ಬಗ್ಗೆ ಮಾತನಾಡಿದ ಫ್ಲಿಪ್ ಕಾರ್ಟ್ನ ನ್ಯೂ ಬ್ಯುಸಿನೆಸಸ್ ನ ಸೀನಿಯರ್ ವೈಸ್ ಪ್ರೆಸಿಡೆಂಟ್ & ಹೆಡ್ ಆದರ್ಶ್ ಮೆನನ್ ಅವರು, `ಶಾಪ್ಸಿಯಲ್ಲಿ ನಮ್ಮ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ವಿಸ್ತಾರವಾದ ಉತ್ಪನ್ನಗಳನ್ನು ಪೂರೈಸುವುದನ್ನು ನಾವು ನಿರಂತರವಾಗಿ ಮುಂದುವರಿಸುತ್ತಿದ್ದೇವೆ. ಗ್ರಾಹಕರ ಅಗತ್ಯತೆಗಳಿಗೆ ತಕ್ಕಂತೆ ಇತ್ತೀಚಿನ ಟ್ರೆಂಡ್ ಮತ್ತು ಬ್ಲೆಂಡ್ ನ ಉತ್ಪನ್ನಗಳನ್ನು ದೇಶಾದ್ಯಂತ ಇರುವ ಗ್ರಾಹಕರಿಗೆ ತಲುಪಿಸುತ್ತಿದ್ದೇವೆ ಎಂದರು.
ಬ್ರ್ಯಾಂಡ್ ಅಂಬಾಸಿಡರ್ ಸಾರಾ ಆಲಿ ಖಾನ್ ಮಾತನಾಡಿ, “ಶಾಪ್ಸಿಯ ಟಿವಿಸಿಗಳು ಪ್ರತಿ ಭಾರತೀಯ ಮನೆಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿವೆ. ಶಾಪ್ಸಿಯೊಂದಿಗೆ ಮತ್ತೊಮ್ಮೆ ಸಹಭಾಗಿತ್ವ ಹೊಂದಲು ಮತ್ತು ಭಾರತೀಯ ಗ್ರಾಹಕರಿಗೆ ಮೌಲ್ಯವರ್ಧಿತ ಶಾಪಿಂಗ್ ಅನುಭವವನ್ನು ಒದಗಿಸುವ ಅವರ ದೃಷ್ಟಿಗೆ ಅವರನ್ನು ಮತ್ತಷ್ಟು ಹತ್ತಿರಕ್ಕೆ ತರಲು ನಾನು ಸಂತೋಷಪಡುತ್ತೇನೆ ಎಂದರು.
ಕಳೆದ ಆರು ತಿಂಗಳಲ್ಲಿ ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ಪ್ಲಾಟ್ ಫಾರ್ಮ್ನಲ್ಲಿನ ಖರೀದಿ 1.8 ಪಟ್ಟು ಹೆಚ್ಚಳವಾಗಿದೆ. ಇವುಗಳಲ್ಲಿ 2 ಮತ್ತು 3 ಶ್ರೇಣಿಯ ನಗರಗಳಲ್ಲಿನ ಖರೀದಿ ಪಾಲು ಶೇ.70ರಷ್ಟು ಆಗಿದೆ. ಇದಲ್ಲದೇ, ಶಾಪ್ಸಿಯು ಉಖ್ರುಲ್ (ಮಣಿಪುರ), ರೆಸುಬೆಲ್ಪರ(ಮೇಘಾಲಯ), ಪ್ರತಾಪ್ ನಗರ(ಉತ್ತರಖಂಡ), ಡಾಪೋರಿಜೊ (ಅರುಣಾಚಲ ಪ್ರದೇಶ) ದಂತಹ ಹೊಸ 2ನೇ ಶ್ರೇಣಿಯ ನಗರಗಳಿಗೂ ತನ್ನ ಸೇವೆಯನ್ನು ವಿಸ್ತರಣೆ ಮಾಡಿದೆ. ಈ ಮೂಲಕ ಸೇವೆಗಳು ಇಲ್ಲದ ಪ್ರದೇಶಗಳಲ್ಲಿಯೂ ಡಿಜಿಟಲ್ ಕಾಮರ್ಸ್ ಸೇವೆಯನ್ನು ಅನ್ಲಾಕ್ ಮಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post