ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪಿಯು ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ತರಬೇತಿ ವ್ಯವಸ್ಥೆಯನ್ನು ಕಲ್ಪಿಸಿ ಅವರನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸಲು ತಮ್ಮ ಸಂಸ್ಥೆ ಮೂಡುಬಿದಿರೆಯ ನ್ಯೂ ವೈಬ್ರೆಂಟ್ ಕಾಲೇಜಿನ #New Vibrant College ಜೊತೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ಶ್ರೀ ಅರಬಿಂದೋ ಪದವಿ ಪೂರ್ವ ಕಾಲೇಜಿನ #Aurabido PU College ಆಡಳಿತ ಮಂಡಳಿಯ ಅಧ್ಯಕ್ಷ ತಲವಾನೆ ಪ್ರಕಾಶ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 25ವರ್ಷಗಳಿಂದ ಶ್ರೀ ಅರಬಿಂದೋ ಫೌಂಡೇಷನ್ ಫಾರ್ ಎಜುಕೇಷನ್ ಟ್ರಸ್ಟ್ ಅಡಿಯಲ್ಲಿ ಶ್ರೀ ಅರಬಿಂದೋ ಪದವಿ ಪೂರ್ವ ಕಾಲೇಜು ಯಶಸ್ವಿಯಾಗಿ ನಡೆಯುತ್ತಿದೆ.
ಸುಸಜ್ಜಿತ ಕಟ್ಟಡ ಲ್ಯಾಬುಗಳು, ಗ್ರಂಥಾಲಯ, ಬಾಲಕ-ಬಾಲಕಿಯರಿಗೆ ಹಾಸ್ಟೆಲ್ ವ್ಯವಸ್ಥೆ, ಸುವ್ಯವಸ್ಥಿತ ಬಸ್ಸುಗಳು ಸೌಲಭ್ಯಗಳನ್ನು ಹೊಂದಿರುವ ಕಾಲೇಜು ಬೋಧನಾ ಅನುಭವವನ್ನು ಹೊಂದಿರುವ ಅನುಭವಿ ಉಪನ್ಯಾಸಕರ ತಂಡವನ್ನು ಹೊಂದಿದೆ. ಇಲ್ಲಿಯವರೆಗೆ ನಮ್ಮ ಕಾಲೇಜಿನ ಉಪನ್ಯಾಸಕರೇ ವಿದ್ಯಾರ್ಥಿಗಳಿಗೆ ಸಿಇಟಿ, ಜೆಇಇ, ನೀಟ್, ಕೆಸಿಇಟಿ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ತರಬೇತಿಯನ್ನು ನೀಡುತ್ತಾ ಬಂದಿದ್ದಾರೆ. ಇನ್ನು ಮುಂದೆ ಇವರ ಜೊತೆಯಲ್ಲಿ ನ್ಯೂ ವೈಬ್ರೆಂಟ್ ಕಾಲೇಜಿನಲ್ಲಿರುವ ಭೋದನಾ ಕ್ರಮ, ತರಬೇತಿ ಕ್ರಮಗಳನ್ನು ಅಲ್ಲಿಯ ಉಪನ್ಯಾಸಕರ ಸಹಯೋಗದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಶ್ರೀ ಅರಬಿಂದೋ ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ್ ಎಂ.ಹೆಗಡೆ ಮಾತನಾಡಿ, ಶಿವಮೊಗ್ಗ ಜಿಲ್ಲೆಯ ಹೆಚ್ಚಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ತರಬೇತಿ ಪಡೆದು ಯಶಸ್ವಿಯಾಗಿ ತಾವು ಇಚ್ಛಿಸಿದ ಕೋರ್ಸ್‍ಗಳಿಗೆ ಸೇರಲು ಈ ಒಡಂಬಡಿಕೆ ಹೆಚ್ಚಿನ ಅವಕಾಶವನ್ನು ಕಲ್ಪಿಸಲಿದೆ. ಅಲ್ಲದೆ ಶಿವಮೊಗ್ಗದ ವಿದ್ಯಾರ್ಥಿಗಳು ಕರಾವಳಿ ಭಾಗದ ಕಾರ್ಕಳ, ಮೂಡುಬಿದಿರೆ ಒದಲಾದಡೆ ಹೋಗಿ ಕಷ್ಟಪಟ್ಟು ಕಾಲೇಜಿಗೆ ಹೋಗುವುದನ್ನು, ಅಲ್ಲಿನ ಆಹಾರ ಇತ್ಯಾದಿಗಳ ತೊಂದರೆಗಳನ್ನು ತಪ್ಪಿಸಲು ತಮ್ಮ ಸಂಸ್ಥೆ ಈ ಒಡಂಬಡಿಕೆ ಮಾಡಿಕೊಂಡಿದೆ. ಕರಾವಳಿ ಭಾಗದ ಉತ್ತಮ ಶಿಕ್ಷಣ ಪದ್ಧತಿಯನ್ನು ನಮ್ಮಲ್ಲಿಯೇ ದೊರೆಯುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು, ಪೋಷಕರು ಇದರ ಪ್ರಯೋಜನ ಪಡೆಯಬೇಕು ಎಂದು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನ್ಯೂ ವೈಬ್ರೆಂಟ್ ಅಕಾಡೆಮಿಯ ಡಾ.ವೆಂಕಟೇಶ್‍ನಾಯಕ್, ಪ್ರಮುಖರಾದ ಬಿ.ಎಲ್.ನೀಲಕಂಠಮೂರ್ತಿ, ಶೇಖ್‍ಮೊಹಮ್ಮದ್, ಚಂದ್ರಶೇಖರ್, ಸುಭಾಷ್ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















