ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಶೇ.100ರಷ್ಟು ಅಂಗವಿಕಲೆಯಾಗಿ ಮಲಗಿದಲ್ಲಿಯೇ ಬಹಳ ವರ್ಷಗಳಿಂದ ಮಲಗಿರುವ 36 ವರ್ಷದ ಹೆಣ್ಣುಮಗಳೊಬ್ಬಳಿಗೆ ಅಮ್ ಅದ್ಮಿ ಪಕ್ಷದ ಮುಖಂಡರು ಸರ್ಕಾರದಿಂದ ಪಿಂಚಣಿ ಕೊಡಿಸುವ ಮೂಲಕ ಸಾರ್ಥಕ ಕಾರ್ಯ ಮಾಡಿದ್ದಾರೆ.
ಹೊಳೆಗಂಗೂರು ಗ್ರಾಮದ ಸುಮಾರು 36 ವರ್ಷದ ಈ ಹೆಣ್ಣು ಮಗಳು ಶೇ.100ರಷ್ಟು ಅಂಗವಿಕಲೆಯಾಗಿದ್ದು, ಪಿಂಚಣಿ ಸೇರಿದಂತೆ ಸರ್ಕಾರದ ಎಲ್ಲ ಸವಲತ್ತುಗಳಿಂದ ವಂಚಿತಗೊಂಡಿದ್ದಾರೆ.
ಇದನ್ನು, ತಿಳಿದ ಎಎಪಿ ಮುಖಂಡರು ಈಕೆಯ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದರು. ಆನಂತರ ಈ ವಿಚಾರವನ್ನು ತಹಶೀಲ್ದಾರ್ ಅವರ ಗಮನಕ್ಕೆ ತಂದು ಪಿಂಚಣಿ ನೀಡುವಂತೆ ಮನವಿ ಮಾಡಲಾಯಿತು. ವಿಷಯ ತಿಳಿದ ತತಕ್ಷಣವೇ ಉಪತಹಶೀಲ್ದಾರ್ ಮಂಜನಾಯಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ತತಕ್ಷಣ ಸಿಬ್ಬಂದಿಗಳಿಗೆ ಕರೆ ಮಾಡಿ, ಈಕೆಗೆ ನಾಳೆಯಿಂದಲೇ ಎಲ್ಲ ರೀತಿಯ ಸರ್ಕಾರಿ ಸೌಲಭ್ಯಗಳು ದೊರೆಯುವಂತಾಗಬೇಕು ಎಂದು ಆದೇಶಿಸಿದರು.
ನಮ್ಮ ಆಮ್ ಆದ್ಮಿ ಪಾರ್ಟಿಯ ಪರಮೇಶ್ವರಚಾರ್, ಇಬ್ರಾಹಿಂ, ಪರಮೇಶ್ವರ್ ನಾಯ್ಕ್, ಜಾವೇದ್, ರವಿಕುಮಾರ್, ಉಪಸ್ಥಿತರಿದ್ದರು.
ಅಸಹಾಯಕ ಅಂಗವಿಕಲೆಯೊಬ್ಬಳ ಸಮಸ್ಯೆ ಅರಿತು ಸರ್ಕಾರದ ಸೌಲಭ್ಯ ದೊರೆಯಲು ಸಹಾಯ ಮಾಡಿದ ಎಎಪಿ ಮುಖಂಡರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post