ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ತಾಲೂಕಿನ 9 ಮಂದಿಯ ಕುಟುಂಬ ಇಂದು ಶಾಸ್ತ್ರೋಕ್ತವಾಗಿ ಮಾತೃಧರ್ಮಕ್ಕೆ ಮರಳಿದ್ದಾರೆ.
ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳದ ನೇತೃತ್ವದಲ್ಲಿ ಅಂತರಗಂಗೆಯ ಗ್ರಾಮದ ನಿವಾಸಿ ಜಯಶೀಲನ್ ಕುಟುಂಬದ ಪತ್ನಿ ಜಯಮ್ಮ, ಕುಟುಂಬ ಸದಸ್ಯರಾದ ಪ್ರಭಾಕರನ್, ಲಲಿತಾ ಪ್ರಭಾಕರನ್ ಮತ್ತು ಇವರ ಮಕ್ಕಳಾದ ಭರತ್ ಕುಮಾರ್, ಭಾವನಾ ಹಾಗೂ ದ್ವಿತೀಯ ಪುತ್ರ ಪ್ರಕಾಶ ಮತ್ತು ಈತನ ಪತ್ನಿ ಶ್ವೇತಾ ಪ್ರಕಾಶ್ ಹಾಗೂ ಇವರ ಪುತ್ರಿ ಪೃಥ್ವಿ ಸೇರಿ 9 ಜನರು ಇಂದು ಮಾತೃಧರ್ಮಕ್ಕೆ ಮರಳಿದ್ದಾರೆ.
ಜನ್ನಾಪುರದಲ್ಲಿ ನೂತನವಾಗಿ ಪುನರ್ ನಿರ್ಮಾಣಗೊಂಡಿರುವ ಸಾರ್ವಜನಿಕ ಶ್ರೀ ರಾಮ ಭಜನಾ ಮಂದಿರದಲ್ಲಿ ಮಹಾಗಣಪತಿ ದೇವಸ್ಥಾನ ಪ್ರಧಾನ ಅರ್ಚಕ ವೇದಬ್ರಹ್ಮ ಕೃಷ್ಣಮೂರ್ತಿ ಸೋಮಯಾಜಿ ಹಾಗೂ ಅರಕೆರೆ ವಿರಕ್ತ ಮಠದ ಶ್ರೀ ಕರಿಸಿದ್ದೇಶ್ವರ ಸ್ವಾಮೀಜಿಯವರ ಸಮ್ಮುಖದಲ್ಲಿ ಹಿಂದೂ ಧರ್ಮಕ್ಕೆ ಮರಳಿ ಸೇರ್ಪಪಡೆಗೊಂಡರು.
ಮೂಲತಃ ಹಿಂದೂ ಧರ್ಮದವರಾದ ಜಯಶೀಲನ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು. ಇದೀಗ ಸ್ವಯಂ ಪ್ರೇರಣೆಯಿಂದ ಇಡೀ ಕುಟುಂಬ ಮಾತೃಧರ್ಮಕ್ಕೆ ಮರಳಿದೆ. ಈ ಸಂದರ್ಭದಲ್ಲಿ ಹಿಂದೂ ಧರ್ಮದ ಪ್ರಮುಖರು ಕುಟುಂಬ ಸದಸ್ಯರನ್ನು ಅಭಿನಂದಿಸುವ ಮೂಲಕ ಮುಂದಿನ ಭವಿಷ್ಯಕ್ಕೆ ಶುಭ ಕೋರಿದರು.
ವಿಶ್ವಹಿಂದೂ ಪರಿಷದ್ ಪ್ರಮುಖರಾದ ಹಾ. ರಾಮಪ್ಪ, ಡಿ.ಆರ್. ಶಿವಕುಮಾರ್, ವೈ.ಎಸ್ ರಾಮಮೂರ್ತಿ, ಎಸ್. ನಾರಾಯಣ್, ಪಿ. ಮಂಜುನಾಥ್ ರಾವ್, ಶೈಲೇಶ್ ಕೋಟಿ, ಸಿ. ಮಹೇಶ್ವರಪ್ಪ, ಶಿವಮೂರ್ತಿ, ಮುತ್ತುರಾಮಲಿಂಗಂ, ಯಶೋಧ ವೀರಭದ್ರಪ್ಪ. ಪಂಚ ರತ್ನಮ್ಮ, ಕೆ.ಆರ್. ವೇದಾವತಿ, ಗಾಯತ್ರಿ, ಆರ್.ಎಸ್ ಶೋಭಾ, ಮಂಜುಳಾ, ಅನ್ನಪೂರ್ಣ ಸತೀಶ್, ಹೇಮಾವತಿ, ಪರಿವಾರದ ಪ್ರಮುಖರಾದ ಬಾ.ನಿ. ಮಹದೇವ, ಕುಲಕರ್ಣಿ, ಕೃಷ್ಣಮೂರ್ತಿ, ಚಂದ್ರಪ್ಪ, ಸುಬ್ರಮಣಿ, ಸುರೇಶ್ ಬಾಬು, ಬಜರಂಗದಳದ ರಾಘವನ್ ವಡಿವೇಲು, ದಿನೇಶ್, ರವಿಕುಮಾರ್, ವಸಂತಕುಮಾರ್, ಬೆಟ್ಟೇಗೌಡ ಮತ್ತು ಶ್ರೀರಾಮ ಸೇನೆಯ ಉಮೇಶ್ ಗೌಡ ಸೇರಿದಂತೆ ಹಿಂದೂ ಪರ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post