ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಆಕಸ್ಮಿಕವಾಗಿ ಕಾಲು ಜಾರಿ 80 ಅಡಿ ಆಳದ ತುಂಗಾ ಚಾನಲ್’ಗೆ ಬಿದ್ದ ವ್ಯಕ್ತಿಯೊಬ್ಬನನ್ನು ನಡು ರಾತ್ರಿಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.ಸಾಗರದ ನೀಚಡಿ ಮೂಲದ ಸಂತೋಷ್ ಬಾಪಟ್(45) ವರ್ಷದ ವ್ಯಕ್ತಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ರಾತ್ರಿ 2.30ರ ವೇಳೆಗೆ ಊರಿಗೆ ತೆರಳುವ ವೇಳೆ ಮೂತ್ರ ವಿಸರ್ಜನೆಗೆಂದು ಸಂತೋಷ್ ತೆರಳಿದ್ದ ವೇಳೆ ಕಾಲು ಜಾರಿ ತುಂಗಾ ಚಾನಲ್’ನ 80 ಅಡಿ ಆಳಕ್ಕೆ ಬಿದ್ದಿದ್ದಾರೆ.
ವಿಷಯ ತಿಳಿದ ಅಗ್ನಿ ಶಾಮಕ ಸಿಬ್ಬಂದಿ 80 ಅಡಿ ಆಳದಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ. ಸಂತೋಷ್ ಕಾಲು ಹಾಗೂ ತಲೆಗೆ ಪೆಟ್ಟಾಗಿದ್ದು ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಡಿಎಫ್’ಒ ಅಶೋಕ್ ಕುಮಾರ್, ಠಾಣಾಧಿಕಾರಿ ಪ್ರವೀಣ್, ಸಿಬ್ಬಂದಿಗಳಾದ ನಾಗರಾಜಪ್ಪ, ವಿನಯ್, ಯೋಗೀಶ್, ಸತೀಶ್ ರಮೇಶ್ ಶಾಂತರಾಜು ಹಾಗೂ ತುಂಗಾ ನಗರ ಪೊಲೀಸರು ಭಾಗಿಯಾಗಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post