ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎಲ್ಲ ವಿಭಾಗಗಳ ವೈದ್ಯರು ಮನೋವಿಜ್ಞಾನ ಅಧ್ಯಯನ ಮಾಡುವುದರಿಂದ ರೋಗಿಯ ಶಾರೀರಿಕ ಸಮಸ್ಯೆಗೆ, ಆತ್ಮಸ್ಥೈರ್ಯ ನೀಡುವ ಮಾನಸಿಕ ಆರೋಗ್ಯ ಚಿಕಿತ್ಸೆಯನ್ನೂ ಸಹ ನೀಡಬಹುದಾಗಿದೆ ಎಂದು ಮಂಗಳೂರಿನ ಖ್ಯಾತ ಮನೋರೋಗ ತಜ್ಞ ಡಾ.ಪಿ.ಕೆ. ಕಿರಣ್ ಕುಮಾರ್ ಅಭಿಪ್ರಾಯಪಟ್ಟರು.
Also Read: ಪರಾರಿಯಾಗಲು ಯತ್ನಿಸಿದ ಆಸಿಡ್ ದಾಳಿ ಆರೋಪಿ ಕಾಲಿಗೆ ಪೊಲೀಸ್ ಗುಂಡೇಟು!
ಇಂಡಿಯನ್ ಸೈಕಿಯಾಟ್ರಿ ಸೊಸೈಟಿ ಹಾಗೂ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಮನೋವಿಜ್ಞಾನ ಚಿಕಿತ್ಸಾ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸೈಕಿಯಾಟ್ರಿ ಕ್ವಿಜ್ ಫಾರ್ ಮೆಡಿಕಲ್ ಯುಜಿ 2020-22 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಶಕಗಳ ಹಿಂದೆ ಸೈಕಿಯಾಟ್ರಿ ಪೋಸ್ಟಿಂಗ್ ಎಂದರೆ ಒಂದು ರೀತಿಯಲ್ಲಿ ಹನಿಮೂನ್ ಎಂಬಂತಹ ಪ್ರತೀತಿಯಿತ್ತು. ಅಷ್ಟೊಂದು ಮುಖ್ಯವಾಹಿನಿಯಲ್ಲಿ ಇರಲಿಲ್ಲ. ಆದರೆ, ಇಂದಿನ ಕಾಲದಲ್ಲಿ ಹಲವು ಖಾಯಿಲೆಗಳೊಂದಿಗೆ ಸೈಕಿಯಾಟ್ರಿ ಸಂಬಂಧವಿದೆ. ಹೀಗಾಗಿ ಎಲ್ಲ ವೈದ್ಯರೂ ಮನೋವಿಜ್ಞಾನವನ್ನು ಓದಿಕೊಳ್ಳಬೇಕು. ಇದರಿಂದಾಗಿ ಒಂದು ಗಂಭೀರ ದೈಹಿಕ ಕಾಯಿಲೆಯ ರೋಗಿಗೆ ಚಿಕಿತ್ಸೆ ನೀಡುವ ವೈದ್ಯರು ಮಾನಸಿಕವಾಗಿಯೂ ಸಹ ಚಿಕಿತ್ಸೆ ನೀಡುವ ಮೂಲಕ ಶೀಘ್ರ ಗುಣಮುಖರಾಗುವಂತೆ ಮಾಡಲು ಸಾಧ್ಯ ಎಂದರು.
ಮನೋವಿಜ್ಞಾನ ಆಧಾರದಲ್ಲಿ ಗುಣಮಟ್ಟದ ಜೀವನದ ಬಗ್ಗೆ ತಿಳಿಯಬಹುದಾಗಿದೆ. ಇಂತಹ ಜೀವನದ ಗುಣಗಳನ್ನು ವೈದ್ಯಕೀಯ ವಿದ್ಯಾರ್ಥಿಗಳು ಸಾರ್ವಜನಿಕರನ್ನು ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡಬೇಕು ಎಂದು ಕರೆ ನೀಡಿದರು.
Also Read: ಚತುಷ್ಪಥ ರಸ್ತೆ ಕಾಮಗಾರಿ: 875 ಮರಗಳ ಕಟಾವು!
ಸಂಸ್ಥೆಯ ವೈದ್ಯಕೀಯ ನಿರ್ದೇಶಕ ಡಾ.ಎಸ್. ನಾಗೇಂದ್ರ ಮಾತನಾಡಿ, ಶಿಕ್ಷಣದ ಜೊತೆಯಲ್ಲಿ ಪೂರಕವಾದ ಜ್ಞಾನ ವೃದ್ಧಿ ಆಗಬೇಕು. ಇದಕ್ಕಾಗಿ ಇಂತಹ ಕ್ವಿಜ್ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ಅಲ್ಲದೇ, ಸೈಕಿಯಾಟ್ರಿ ಜೊತೆಯಲ್ಲಿ ಬೇರೆ ವಿಭಾಗಗಳನ್ನು, ಬೇರೆ ಕಾಲೇಜುಗಳ ವಿದ್ಯಾರ್ಥಿಗಳ ಹಾಗೂ ಶಿಕ್ಷಕರನ್ನು ಸೇರಿಸಿಕೊಂಡಾಗ ಹೆಚ್ಚಿನ ಯಶಸ್ಸು ಸಾಧ್ಯ ಎಂದರು.

ರಾಜ್ಯಮಟ್ಟದಲ್ಲಿ ನಡೆದ ಈ ಕ್ವಿಜ್ ಸ್ಪರ್ಧೆಯಲ್ಲಿ ಬಹಳಷ್ಟು ಕಾಲೇಜಿನ ವಿದ್ಯಾರ್ಥಿಗಳು ಆನ್’ಲೈನ್ ಮೂಲಕ ಪಾಲ್ಗೊಂಡಿದ್ದರು. ಇದರಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಈಗ ಅಂತಿಮ ಹಂತದ ಸ್ಪರ್ಧೆ ಸುಬ್ಬಯ್ಯ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.
ಕಾರ್ಯಕ್ರಮದಲ್ಲಿ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕಿ ಡಾ.ವಿನಯ ಶ್ರೀನಿವಾಸ್, ಮನೋವಿಜ್ಞಾನ ವಿಭಾಗದ ಎಚ್’ಒಡಿ ಡಾ.ಹರೀಶ್ ದಲಂತಬೆಟ್ಟು, ಉಪಪ್ರಾಂಶುಪಾಲ ಡಾ.ಸಿದ್ದಲಿಂಗಪ್ಪ, ಮನೋವಿಜ್ಞಾನ ವಿಭಾಗದ ಡಾ.ಕೆ.ಎಸ್. ಶುಭ್ರತಾ, ಡಾ.ನಿರಂಜನ ಹೆಬ್ಬಾರ್, ಡಾ.ದಯಾನಂದ ಸಾಗರ್, ಡಾ.ಸಂಜಯ್, ಪೆಥಾಲಜಿ ವಿಭಾಗದ ಪ್ರೊ.ವೈಭವ್ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post