ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ವ್ಯಾಪಾರದ ಸಂದರ್ಭದಲ್ಲಿ ಸೋಂಕುಗಳು ತಗಲದಂತೆ ಹೆಚ್ಚಿನ ಮುಂಜಾಗ್ರತೆಯನ್ನು ವಹಿಸಬೇಕು ಎಂದು ಗಾಂಧಿ ಬಜಾರ್ ವರ್ತಕರ ಸಂಘದ ಅಧ್ಯಕ್ಷ ವಿಜಯ್ ಕುಮಾರ್ ದಿನಕರನ್ ಅಭಿಪ್ರಾಯಪಟ್ಟರು.
ನವರಾತ್ರಿಯ ಮೊದಲ ದಿನವಾದ ಇಂದು ಗಾಂಧಿ ಬಜಾರ್‌ನ ಬಸವೇಶ್ವರ ದೇವಸ್ಥಾನದಲ್ಲಿ ಭೂಮಿ ಸಂಸ್ಥೆ, ಅಥರ್ವ್ ಎಂಟರ್ಪ್ರೆûಸಸ್, ಕಾಮನ್ ಮ್ಯಾನ್ ಸಂಸ್ಥೆಗಳ ಮೂಲಕ ಗಾಂಧಿ ಬಜಾರ್ ವರ್ತಕರ ಸಂಘದ ಪದಾಧಿಕಾರಿಗಳಿಗೆ ಕೋವಿಡ್19 ಬಗ್ಗೆ ಜಾಗೃತಿ ಮತ್ತು ನಿರ್ವಹಣೆ ಬಗ್ಗೆ ಸಂವಾದ ಕಾರ್ಯಕ್ರಮ ಅವರು ಮಾತನಾಡಿದರು.
ನಿಮ್ಮ ಮಗು ಬುದ್ದಿಶಾಲಿಯಾಗಿ ಹುಟ್ಟಬೇಕೆ? ಸದೃಢ ಮೈಕಟ್ಟು ಹೊಂದಿ ಕಾಂತಿಯುತವಾಗಬೇಕೆ? ಇಲ್ಲಿದೆ ಮಾರ್ಗ
ವ್ಯಾಪಾರದ ಸಮಯದಲ್ಲಿ ಜಾಗೃತಿಯಾಗಿರುವ ಬಗ್ಗೆ ವಿವರವಾದ ಮಾಹಿತಿ ನೀಡಿದ ಅವರು, ಆಯುರ್ವೇದ ಔಷಧಿಗಳು, ಮನೆ ಮದ್ದು ಈ ಸಂದರ್ಭದಲ್ಲಿ ಉಪಯುಕ್ತ ಎಂದು ಅಭಿಪ್ರಾಯಪಟ್ಟರು.
ವರ್ತಕರ ಸಂಘದ ಖಜಾಂಚಿಗಳಾದ ಡಾ. ಎಸ್.ವಿ. ಭರತ್ ಮಾತನಾಡಿ, ಕೋವಿಡ್ 19 ವೈರಾಣು ಬಗ್ಗೆ ಸೋಂಕಿನ ಗುಣ ಲಕ್ಷಣ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಸೋಂಕಿನ ಲಕ್ಷಣ ಕಂಡು ಬಂದಲ್ಲಿ ತಕ್ಷಣ ಪರೀಕ್ಷೆ ಮಾಡಿಸಿ. ಮೆಗ್ಗಾನ್ ಆಸ್ಪತ್ರೆಯ ಸೌಕರ್ಯಗಳು ಗುಣಮಟ್ಟದಲ್ಲಿ ಇದೆ, ಸೂಕ್ತ ಚಿಕಿತ್ಸೆ ಪಡೆಯಬಹುದು ಎಂದು ಮಾಹಿತಿ ನೀಡಿದರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದು ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಯಲ್ಲಿ ಎಂದು ಚರ್ಚಿಸಲಾಯಿತು. ಅಥರ್ವ್ ಎಂಟರ್ಪ್ರೆûಸಸ್ ರಾಘವೇಂದ್ರ ಆರ್. ಪೈಡಾಲ್’ರವರು ಮಾಸ್ಕ್ ವಿತರಿಸಿದರು.

ಆರ್ಥಿಕತೆ ಪಾತಾಳಕ್ಕೆ ಇಳಿದಿರುವ ಸಂದರ್ಭದಲ್ಲಿ ಶಾಂತಿ ಸಹಬಾಳ್ವೆ ಮುಖ್ಯ. ಎಲ್ಲರು ಒಗ್ಗಟ್ಟಾಗಿ ಮುಂದಿರುವ ಸಮಸ್ಯೆಗಳನ್ನು ಎದುರಿಸೋಣ ಎಂದು ಸಂವಾದ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.
ಗಾಂಧಿ ಬಜಾರ್ ವರ್ತಕರ ಸಂಘದ ಕಾರ್ಯದರ್ಶಿ ರಾಕೇಶ್ ಸಾಕ್ರೆ ಸ್ವಾಗತ ಕೋರಿ, ನಿರ್ದೇಶಕರಾದ ನವೀನ್ ಸಾಕ್ರೆ ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಅಥರ್ವ್ ಎಂಟರ್ಪ್ರೆûಸಸ್ ರಾಘವೇಂದ್ರ ಆರ್. ಪೈಡಾಲ್, ಗಾಂಧಿ ಬಜಾರ್ ವರ್ತಕರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post