ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ನಿನ್ನೆ ಮಧ್ಯಾಹ್ನದ ನಂತರ ಸುರಿದ ಭಾರೀ ಮಳೆ ನಗರ, ಜಿಲ್ಲಾ ಕೇಂದ್ರ ಸೇರಿದಂತೆ ಹಲವು ಕಡೆ ಅವಾಂತರ ಸೃಷ್ಠಿಸಿದ್ದು, ಹೆದ್ದಾರಿ ಸವಾರರಿಗೂ ತೊಂದರೆಯುಂಟಾಗಿತ್ತು.
ಮಾಚೇನಹಳ್ಳಿ ಡೈರಿ ಬಳಿಯ ಹಳೇ ಜೇಡಿಕಟ್ಟೆ ಬಳಿ ಹೆದ್ದಾರಿಯಲ್ಲಿ ಸುಮಾರು ಅರ್ಧ ಕಿಲೋ ಮೀಟರ್’ಗೂ ಉದ್ದ 1.5 ಅಡಿಗಳಷ್ಟು ನೀರು ನಿಂತಿದ್ದು, ವಾಹನ ಸಂಚಾರಕ್ಕೆ ತೊಂದರೆಯುಂಟಾಗಿತ್ತು.
ಭದ್ರಾವತಿಯಿಂದ ಶಿವಮೊಗ್ಗಕ್ಕೆ ಸಂಚರಿಸುವ ಮಾರ್ಗದಲ್ಲಿನ ಹಳೇ ಜೇಡಿಕಟ್ಟೆ ಬಳಿಯ ರಸ್ತೆ ಸುಮಾರು ಅರ್ಧ ಕಿಲೋ ಮೀಟರ್’ಗೂ ದೂರ ನೀರು ರಭಸವಾಗಿ ಹರಿಯುತ್ತಿತ್ತು. ಈ ಪ್ರದೇಶದಲ್ಲಿ ಹೆದ್ದಾರಿ ತೀವ್ರ ದುಸ್ಥಿತಿ ತಲುಪಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ನಿಮ್ಮ ಮಗು ಬುದ್ದಿಶಾಲಿಯಾಗಿ ಹುಟ್ಟಬೇಕೆ? ಸದೃಢ ಮೈಕಟ್ಟು ಹೊಂದಿ ಕಾಂತಿಯುತವಾಗಬೇಕೆ? ಇಲ್ಲಿದೆ ಮಾರ್ಗ
ರಸ್ತೆ ಹಾಳಾಗಿರುವ ಪ್ರದೇಶದಲ್ಲೇ 1.5 ಅಡಿಗಳಷ್ಟು ನೀರು ಹರಿಯುತ್ತಿದ್ದ ಪರಿಣಾಮವಾಗಿ ದ್ವಿಚಕ್ರ ವಾಹನಗಳ ಸಂಚರಿಸುವುದು ತೀವ್ರ ತ್ರಾಸದಾಯಕವಾಗಿತ್ತು. ಮಾತ್ರವಲ್ಲ ಕಾರು, ಲಾರಿ ಹಾಗೂ ಬಸ್’ಗಳೂ ಸಹ ನಿಧಾನಗತಿಯಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇನ್ನು, ಮಲವಗೊಪ್ಪ ಕಾಡಾ ಕಚೇರಿ ಮುಂಭಾಗದಲ್ಲೂ ಸಹ ಭಾರೀ ಪ್ರಮಾಣದಲ್ಲಿ ನೀರು ನಿಂತಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿತ್ತು. ಈ ಭಾಗದಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಪ್ರತಿ ಮಳೆಗಾಲದಲ್ಲೂ ಇಲ್ಲಿ ನೀರು ನಿಲ್ಲುವ ಸಮಸ್ಯೆ ಎದುರಾಗುತ್ತದೆ. ಇದಕ್ಕೊಂದು ಶಾಶ್ವತ ಪರಿಹಾರ ಮಾಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















