ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೋವಿಡ್19 ಸಂಕಷ್ಟದ ನಡುವೆಯೂ ಸಹ ಪರಂಪರೆಯನ್ನು ಮುಂದುವರೆಸುವ ದೃಷ್ಠಿಯಿಂದ ಸರಳವಾಗಿ, ಕೊರೋನಾ ಜಾಗೃತಿ ಮೂಡಿಸುವ ಹಬ್ಬವನ್ನಾಗಿ ನಗರಸಭೆಯಿಂದ ಆಚರಿಸಲಾಗುತ್ತಿದೆ ಎಂದು ರೆವಿನ್ಯೂ ಅಧಿಕಾರಿ ರಾಜ್’ಕುಮಾರ್ ಹೇಳಿದರು.
ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ಅವರು, ಕೊರೋನಾ ಕುರಿತಾಗಿ ಜಾಗೃತಿ ಮೂಡಿಸುವ ಸಲುವಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಜಾಗೃತಿ ನಡಿಗೆ, ಆಶು ಕವನ ವಾಚನ, ಕೊರೋನಾ ಯಾತನೆಯನ್ನು ಚಿತ್ರಿಸುವ ರಂಗೋಲಿ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಸಲಾಗುತ್ತಿದೆ.
ನಿಮ್ಮ ಮಗು ಬುದ್ದಿಶಾಲಿಯಾಗಿ ಹುಟ್ಟಬೇಕೆ? ಸದೃಢ ಮೈಕಟ್ಟು ಹೊಂದಿ ಕಾಂತಿಯುತವಾಗಬೇಕೆ? ಇಲ್ಲಿದೆ ಮಾರ್ಗ
ಒಂದು ಕುಟುಂಬ ಜಾಗೃತಗೊಳ್ಳಬೇಕು ಎಂದರೆ ಸ್ತ್ರೀಯರಿಗೆ ಮೊದಲು ಜಾಗೃತಿ ಮೂಡಬೇಕು. ಇದಕ್ಕಾಗಿ ಕೊರೋನಾ ಸಂಬಂಧಿಸಿದಂತೆಯೇ ಮಾನಿನಿಯರಿಗೆ ಹೆಚ್ಚಿನ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.
ಇದರೊಟ್ಟಿಗೆ ಅಡುಗೆ ಆರೋಗ್ಯ, ಕೊರೋನಾ ಸಂಬಂಧಿತ ಪ್ರಬಂಧ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆಗಳನ್ನೂ ಸಹ ಆಯೋಜಿಸಲಾಗಿದೆ ಎಂದರು.
ಕೊರೋನಾ ಹಿನ್ನೆಲೆಯಲ್ಲಿ ಸರಳ ದಸರಾ ಆಚರಿಸುತ್ತಿದ್ದು, ನಾಗರಿಕರ ಸಹಕರಿಸಬೇಕು. ಸಾಧ್ಯವಾದಷ್ಟು ಜನರಲ್ಲಿ ಜಾಗೃತಿ ಮೂಡಿಸುವ ಎಲ್ಲ ರೀತಿಯ ಕಾರ್ಯಗಳನ್ನು ನಾಗರಿಕರು ಮಾಡಬೇಕು.
ನಗರಸಭೆಯಿಂದ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅ.23ರಂದು ಮಧ್ಯಾಹ್ನ 3 ಗಂಟೆಗೆ ಕನಕ ಮಂಟಪ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಗುವುದು. ಸ್ಪರ್ಧೆಗಳಲ್ಲಿ ಪಾಲ್ಗೊಂಡವರಿಗೂ ಸಹ ಪ್ರಶಂಸಾಪತ್ರಗಳನ್ನು ವಿತರಣೆ ಮಾಡಲಾಗುವುದು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post