ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಪಾಕಿಸ್ಥಾನ, ಬಾಂಗ್ಲಾದೇಶದೊಂದಿಗೆ ನಡೆದ ಕೆಲವು ಯುದ್ಧಗಳಲ್ಲಿ ಪಾಲ್ಗೊಂಡು ಈಗ ಭದ್ರಾವತಿಯಲ್ಲಿ ನೆಲೆಸಿರುವ ಮಾಜಿ ಸೈನಿಕ ಪಿ. ದಿಗಂಬರ್ ಅವರನ್ನು ಮುಖ್ಯ ಅಂಚೆ ಕಚೇರಿಯಲ್ಲಿ ಗೌರವಿಸಲಾಯಿತು.
ವಿಶ್ವ ಅಂಚೆ ಸಪ್ತಾಹದ ಸಂಪನ್ನದ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಿಗಂಬರ್ ಅವರನ್ನು ಸನ್ಮಾನಿಸಲಾಯಿತು. ಇವರ ಪಿಒ ಖಾತೆ 1982ರಿಂದಲೂ ಇದೇ ಕಚೇರಿಯಲ್ಲಿದ್ದು, ಇದು ಅತ್ಯಂತ ಹಳೆಯ ಖಾತೆಯಾಗಿದೆ.
ಇನ್ನು ದಿಗಂಬರ್ ಅವರು, 1965ರ ಇಂಡೋ ಪಾಕ್ ಯುದ್ಧ, 1971 ಇಂಡೋ-ಪಾಕ್ – ಮರಾಠಾ ಲೈಟ್ ಕಾಲಾಳುಪಡೆಯ ಮೂಲಕ ಬಾಂಗ್ಲಾ ಯುದ್ಧದಲ್ಲಿ ಅವರು ಪಾಲ್ಗೊಂಡಿದ್ದಾರೆ.
ಕಾರ್ಯಕ್ರದಲ್ಲಿ ವಿಐಎಸ್’ಎಲ್ ಜಿಎಂ(ಸಾರ್ವಜನಿಕ ಸಂಪರ್ಕ), ಹಿರಿಯ ಅಂಚೆ ಚೀಟಿ ಸಂಗ್ರಹಕಾರ ಎಸ್.ಕೆ. ಗಣೇಶ್, ಪೋಸ್ಟ್ ಮಾಸ್ಟರ್ ಶಶಿಧರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post