ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಹುತ್ತಾಕಾಲೋನಿ ನಿವಾಸಿ ಎಂ.ಎಸ್. ಸುಮಾ ಹಿರೇಮಠ್ ಅವರು ಜೈವಿಕ ತಂತ್ರಜ್ಞಾನದಲ್ಲಿ ಡೆವಲಪ್ಮೆಂಟ್ ಅಂಡ್ ಕ್ಯಾರೆಕ್ಟರೈಜೇಷನ್ ಆಫ್ 3ಡಿ ಸ್ಕಾಫೋಲ್ಡ್ ಕಲ್ಚರ್ ಫಾರ್ ಡ್ರಗ್ ಟ್ಯಾಕ್ಸಿಸಿಟಿ ಸ್ಟಡೀಸ್ ಹೆಪಟೋಸೈಟಿಸ್ ಎಂಬ ಪ್ರಬಂಧ ಮಂಡಿಸಿದಕ್ಕಾಗಿ ಕುವೆಂಪು ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.
ಇವರಿಗೆ ಪ್ರೊ. ಸಿ.ಕೆ. ರಮೇಶ್ ಮತ್ತು ಪ್ರೊ. ರಿಯಾಜ್ ಮೊಹಮೂದ್ ಮಾರ್ಗದರ್ಶನ ಮಾಡಿದ್ದರು.
ಸುಮಾ ಅವರ ಸಂಶೋಧನೆಗೆ ಪ್ರತಿಷ್ಟಿತ ಪುರಸ್ಕಾರವಾದ ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ ಹಿರಿಯ ಸಂಶೋಧನಾ ಶಿಷ್ಯವೇತನ ನೀಡಿದ್ದು, ಬೆಂಗಳೂರಿನ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯ ಸಂಶೋಧನಾ ಅನುಭವ ಹೊಂದಿದ್ದಾರೆ. ಇವರ ಸಂಶೋಧನಾ ಲೇಖನಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬೆಂಗಳೂರಿನ ಆಚಾರ್ಯ ಇನ್ಸ್ಟಿಟ್ಯೂಟ್‌ನಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಇವರು ಮಂಡಿಸಿದ ಅತ್ಯುತ್ತಮ ಮೌಖಿಕ ಪ್ರಸ್ತುತಿ ಪ್ರಶಸ್ತಿಯನ್ನು ಗಳಿಸಿದ ಗೌರವಕ್ಕೆ ಪಾತ್ರರಾಗಿದ್ದಾರೆ. ಐರ್ಲೆಂಡ್ ದೇಶದ ಡಬ್ಲಿನ್‌ನಲ್ಲಿ 8 ನೆಯ ವರ್ಲ್ಡ್ ಕಾಂಗ್ರೆಸ್ ಆಫ್ ಬಯೋಮೆಕ್ಯಾನಿಕ್ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿಯೂ ಸಹ ಪ್ರಬಂಧ ಮಂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post