ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೊರೋನಾ ನಡುವೆಯೂ ನಗರಸಭೆ ಸಾಹಿತ್ಯ ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ರೀತಿಯಲ್ಲಿ ಕೋವಿಡ್ ಕುರಿತಂತೆ ಸ್ವರಚಿತ ಕವನರಚನಗೆ ಸ್ಪರ್ಧೆ ಏರ್ಪಡಿಸಿರುವುರದು ನಿಜಕ್ಕೂ ಅಭಿನಂದನಾರ್ಹ ಕಾರ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಅಪೇಕ್ಷ ಮಂಜುನಾಥ್ ಹೇಳಿದರು.
ನಗರಸಭೆಯ ಸರ್ ಎಂವಿ ಸಭಾಂಗಣದಲ್ಲಿ ನಗರಸಭೆ ಕೋವಿಡ್ ಜನಜಾಗೃತಿ ದಸರಾ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಕೋವಿಡ್ ಕುರಿತಂತೆ ಸ್ವರಚಿತ ಕವನ ಬರಹ ಮತ್ತು ವಾಚನಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊರೋನಾ ಸಂಕಷ್ಠ ಪರಿಸ್ಥಿತಿ ನಿವಾರಣೆಯಾದ ನಂತರದ ದಿನಗಳಲ್ಲಿ ಸಾಹಿತ್ಯಾಸಕ್ತರಿಗೆ ಕನ್ನಡ ಸಾಹಿತ್ಯ ಪರಿಷತ್ ವಿಶೇಷ ಕಾರ್ಯಕ್ರಮ ನಡೆಸಿ ಸಾಹಿತ್ಯ ಕೃಷಿಗೆ ಅವಕಾಶ ನೀಡಿ ಸನ್ಮಾನಿಸುವ ಕೆಲಸ ಮಾಡಲಿದೆ ಎಂದರು.
ನಿಮ್ಮ ಮಗು ಬುದ್ದಿಶಾಲಿಯಾಗಿ ಹುಟ್ಟಬೇಕೆ? ಸದೃಢ ಮೈಕಟ್ಟು ಹೊಂದಿ ಕಾಂತಿಯುತವಾಗಬೇಕೆ? ಇಲ್ಲಿದೆ ಮಾರ್ಗ
ಪ್ರಾಸ್ಥಾವಿಕ ನುಡಿಗಳನ್ನಾಡಿದ ನಗರಸಭೆ ಕಂದಾಯಾಧಿಕಾರಿ ರಾಜ್‌ಕುಮಾರ್, ಕಳೆದವರ್ಷ ಭದ್ರಾವತಿ ನಗರಸಭೆ ವಿಜೃಂಭಣೆಯಿಂದ ದಸರಾ ಮಹೋತ್ಸವವನ್ನು ಸಂಪ್ರದಾಯಬದ್ಧವಾಗಿ ಆಚರಿಸಿತ್ತು. ಆದರೆ ಈ ಬಾರಿ ಕೋವಿಡ್-19 ಇದ್ದರೂ ಸಹ ಹಿರಿಯರು ಹಾಕಿಕೊಟ್ಟ ಸಂಪ್ರದಾಯವನ್ನು ಬಿಡದ ರೀತಿ ಸರಳ ದಸರಾ ಮೂಲಕ ಕೋವಿಡ್ ಜನಜಾಗೃತಿ ಉಂಟು ಮಾಡಲಾಗುತ್ತಿದೆ. ಅದರ ಅಂಗವಾಗಿ ಏರ್ಪಡಿಸಿರುವ ಈ ಸ್ವರಚಿತ ಕವನ ರಚನೆ ಮತ್ತು ವಾಚನ ಸ್ಪರ್ಧೆಯಲ್ಲಿ ಸ್ಪರ್ಧಾಳುಗಳು ಕೋವಿಡ್’ನಿಂ ಆಗಿರುವ ನೋವು, ಸಂಕಟ ಅನುಭವ ಎಲ್ಲವನ್ನೂ ಒಳಗಂಡ ಅಂಶಗಳಿಗೆ ಕವನದ ಸ್ಪರ್ಶ ನೀಡಿ ಈ ಮೂಲಕವೂ ಸಹ ಜನಜಾಗೃತಿ ಉಂಟುಮಾಡಲು ಸಹಕರಿಸಬೇಕು ಎಂದರು.
ಸಂಯೋಜನಾಧಿಕಾರಿ ಸುಹಾಸಿನಿ ಮಾತನಾಡಿ, ರಾಜ್ಯದಲ್ಲಿ ಭದ್ರಾವತಿ ನಗರಸಭೆ ಮಾದರಿಯಾಗಿದ್ದು ದಸರಾ ಮಹೋತ್ಸವಕ್ಕೆ ಈಬಾರಿ ಕೋವಿಡ್ ದಸರ ಜನಜಾಗೃತಿ ಎಂಬ ಶೀರ್ಷೀಕೆಯೇ ಎಲ್ಲರನ್ನು ಆಕರ್ಷಿಸುತ್ತಿರುವುದು ಇದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದರು.

ಸ್ಪರ್ಧೆಯಲ್ಲಿ 80 ವರ್ಷದ ವಯೋವೃದ್ಧ ರಾಮಾಚಾರ್, ಗುಣ, ಜ್ಯೋತಿ ರಾಜಶೇಖರ್, ಜಾಧವ್, ಮಾಯಮ್ಮ, ದೇವಿಕಾ ನಾಗರಾಜ್, ರವಿಪ್ರಸಾದ್, ಲೀಲಾ ಷಡಾಕ್ಷರಿ, ಭಾರತಿ, ಸುಮತಿ ಕಾರಂತ್, ಮಂಜುಳಾ, ನರಸಿಂಹಮೂರ್ತಿ, ಸೌಭಾಗ್ಯ, ಪ್ರಜ್ಞಾ ಸೇರಿದಂತೆ 15 ಸ್ಪರ್ಧಿಗಳು ಭಾಗವಹಿಸಿ ಕಿಲ್ಲರ್ ಕೊರೋನಾ, ಕೋವಿಡ್ ಸಂಕಟ, ಕೊರೋನಾ ಮಾರಿ ಮುಂತಾದ ಶೀರ್ಷೀಕೆ ಅಡಿಯಲ್ಲಿ ಸ್ವರಚಿತ ಕವನಗಳನ್ನು ರಚಿಸಿ ವಾಚಿಸಿದರು.
ಅಂತಿಮವಾಗಿ ಸ್ಪರ್ಧೆಯಲ್ಲಿ ಸುಮತಿ ಕಾರಂತ್, ಗುಣ, ದೇವಿಕಾ ಅವರುಗಳ ವಿಜೇತರಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post