ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ನಗರಸಭೆಯಿಂದ ಆಚರಿಸುತ್ತಿರುವ ದಸರಾ ಹಬ್ಬದ ಜೊತೆಯಲ್ಲಿ ಕೊರೋನಾ ಕುರಿತಾಗಿ ಜಾಗೃತಿ ಮೂಡಿಸುವ ಸಲುವಾಗಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ನಾರಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ವಳ್ಳುವರ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸ್ಪರ್ಧೆಯ ತೀರ್ಪುಗಾರರು ವೇದಿಕೆ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು.
ನಿಮ್ಮ ಮಗು ಬುದ್ದಿಶಾಲಿಯಾಗಿ ಹುಟ್ಟಬೇಕೆ? ಸದೃಢ ಮೈಕಟ್ಟು ಹೊಂದಿ ಕಾಂತಿಯುತವಾಗಬೇಕೆ? ಇಲ್ಲಿದೆ ಮಾರ್ಗ
ಸ್ಪರ್ಧೆಯಲ್ಲಿ ಸುಮಾರು 32 ಮಹಿಳೆಯರು ಹೆಸರು ನೋಂದಾಯಿಸಿಕೊಂಡಿದ್ದು, 26 ಮಾನಿನಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಎಲ್ಲ ರೀತಿಯ ರಂಗೋಲಿ ವಿನ್ಯಾಸಕ್ಕೆ ಅವಕಾಶವಿದ್ದರೂ, ಕೊರೋನಾ ಕುರಿತಾಗಿ ಜಾಗೃತಿ ಮೂಡಿಸುವ ರಚನೆಗೆ ಪ್ರಾಶಸ್ತ್ಯ ನೀಡಲಾಗಿತ್ತು.
ತೀರ್ಪುಗಾರರಾಗಿ ಕಲಾವೇಣಿ ಆರ್ಟ್ಸ್’ನ ಜಯರಾಮ್, ಗುರು ಆರ್ಟ್ಸ್’ನ ಮುಖ್ಯಸ್ಥರು, ಕೃಷ್ಣ ಕಾಲೇಜಿನ ಪ್ರಾಂಶುಪಾಲ ಶಿವಬಸಪ್ಪ ಪಾಲ್ಗೊಂಡಿದ್ದರು.
ಈ ಸ್ಪರ್ಧೆಯಲ್ಲಿ ಡಾ.ಸಿರಿ ಸುದರ್ಶನ್ ಪ್ರಥಮ ಸ್ಥಾನ, ಸುರಭಿ ಮಾದ್ವರಾಜ್ ದ್ವಿತೀಯ ಸ್ಥಾನ, ಬಿ.ಜೆ. ಸತ್ಯ ತೃತೀಯ ಸ್ಥಾನ ಗಳಿಸಿದ್ದರೆ, ನಗರಸಭೆಯಲ್ಲಿ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಲಿಂಗಮ್ಮ ಅವರು ಸಮಾಧಾನಕರ ಬಹುಮಾನ ಪಡೆದಿದ್ದಾರೆ.
ವೇದಿಕೆ ಕಾರ್ಯಕ್ರಮದಲ್ಲಿ ಆಯುಕ್ತ ಮನೋಹರ್, ರೆವಿನ್ಯೂ ಅಧಿಕಾರಿ ರಾಜ್’ಕುಮಾರ್, ಸೂಪರ್’ಇನ್ಟಂಡೆಂಟ್ ಮಹಮದ್ ಅಲಿ, ಮ್ಯಾನೇಜರ್ ಸುನೀತಾ ಕುಮಾರಿ, ಆರೋಗ್ಯಾಧಿಕಾರಿ ಸುಹಾಸಿನಿ, ಪ್ರಮುಖರಾದ ನರಸಿಂಹಾಚಾರ್, ರಮಾಕಾಂತ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ವಿಜೇತರನ್ನು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಅಭಿನಂದಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post