ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೋವಿಡ್19 ಲಾಕ್ ಡೌನ್ ಹಾಗೂ ನೆರೆ ಸಂತ್ರಸ್ತರಾಗಿ ಸಂಕಷ್ಟದಲ್ಲಿರುವ ವೃತ್ತಿನಿರತ ಛಾಯಾಗ್ರಾಹಕರಿಗಾಗಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ತಾಲೂಕು ಛಾಯಾಗ್ರಾಹಕರ ಸಂಘ ಮನವಿ ಮಾಡಿದೆ.
ಈ ಕುರಿತಂತೆ ತಹಶೀಲ್ದಾರ್’ಗೆ ಮನವಿ ಸಲ್ಲಿಸಿದ ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳು, ಅಸಂಘಟಿತ ಕಾರ್ಮಿಕ ವಲಯದ 42ನೆಯ ವರ್ಗಕ್ಕೆ ಸೇರಿದ ಛಾಯಾಗ್ರಾಹಕರಿಗೆ ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಸ್ಮಾರ್ಟ್ ಕಾರ್ಡ್ ನೀಡಬೇಕು ಎಂದು ಬೇಡಿಕೆ ಇಟ್ಟರು.
ವೃತ್ತಿನಿರತ ಛಾಯಾಗ್ರಾಹಕರಿಗೆ ವ್ಯಾಪಾರದ ನೆರವಿಗೆ ಸರ್ಕಾರ ಹಾಗೂ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಒದಗಿಸಬೇಕು, ಸರ್ಕಾರಿ ಕೆಲಸಗಳಿಗೆ, ಸ್ಟುಡಿಯೋ ಪಾಸ್ಪೋರ್ಟ್ ತೆಗೆಯಲು ವತ್ತಿಪರರಿಗೆ ಆದ್ಯತೆ ನೀಡಬೇಕು, ಸರ್ಕಾರದಿಂದ ಆರೋಗ್ಯ ವಿಮೆ, ಅಪಘಾತ ವಿಮೆ, ಪರಿಗರಗಳ ವಿಮೆ ಹಾಗೂ ಜೀವ ವಿಮೆ ಯೋಜನೆಗಳನ್ನು ಜಾರಿಗೊಳಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳುಳ್ಳ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಎಚ್. ರಾಮಕೃಷ್ಣ, ಕಾರ್ಯದರ್ಶಿ ಎಸ್.ಬಿ. ಸಿದ್ದಪ್ಪ, ಖಜಾಂಚಿ ರೇಣುಕಾಚಾರ್ಯ, ಸಂಘದ ಕುಮಾರ್, ಸುರೇಶ್, ವಡಿವೇಲು, ಲೋಕೇಶ್, ಶಿವಾನಂದ್, ಹೇಮಂತ್, ಪಾಪಣ್ಣ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post