ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಎಂಎಸ್’ಐಎಲ್ ಅಂಗಡಿಗಳಲ್ಲಿ ಮದ್ಯದ ದರಪಟ್ಟಿ ಪ್ರಕಟಿಸದಿರುವ ಬಗ್ಗೆ ಹಾಗೂ ಮದ್ಯದಂಗಡಿ ಸ್ಥಳಾಂತರಿಸದಿರುವ ಕುರಿತಂತೆ, ಮೈಕ್ರೋ ಫೈನಾನ್ಸ್ ನಿಗಮದ ಮಹಿಳೆಯರಿಗೆ ಆಗುತ್ತಿರುವ ಕಿರುಕುಳ ಮುಂತಾದವನ್ನು ವಿರೋಧಿಸಿ ಜೆಡಿಯು ಮುಖಂಡ ಶಶಿಕುಮಾರ್ ಎಸ್. ಗೌಡ ಕಳೆದ ಒಂದು ವಾರದಿಂದ ತಾಲೂಕು ಕಚೇರಿ ಮುಂದೆ ನಡೆಸುತ್ತಿದ್ದ ಏಕಾಂಗಿ ಧರಣಿ ಸತ್ಯಾಗ್ರಹವನ್ನು ಶುಕ್ರವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.

ಉಳಿದಂತೆ ಮದ್ಯದಂಗಡಿ ಸ್ಥಳಾಂತರಿಸುವ ಕುರಿತಂತೆ, ಮೈಕ್ರೋ ಫೈನಾನ್ಸ್’ನಿಂದ ಮಹಿಳೆಯರಿಗೆ ಆಗುತ್ತಿರುವ ಕಿರುಕುಳ ತಡೆಗೆ ಆಗ್ರಹಿಸಿ ಅಬಕಾರಿ ಇನ್ಸ್‌ಪೆಕ್ಟರ್ ಅಮಾನತ್ತಿಗೆ ಆಗ್ರಹಿಸಿ ನ.4ರಂದು ಬೆಳಿಗ್ಗೆ ಭದ್ರಾವತಿ ತಹಶೀಲ್ದಾರ್ ಕಚೇರಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಅಬಕಾರಿ ಉಪಾಯುಕ್ತರ ಕಚೇರಿಗೆ ಪಾದಯಾತ್ರೆ ನಡೆಸುತ್ತೇನೆ ಎಂದರು.
ಸತ್ಯಾಗ್ರಹ ಹಿಂಪಡೆಯುತ್ತಿರುವ ಸಂದರ್ಭದಲ್ಲಿ ತಹಶೀಲ್ದಾರ್ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್. ರಾಜು, ರಕ್ಷಣಾ ವೇದಿಕೆ ಅಧ್ಯಕಗ್ಷ ಬಿ.ವಿ. ಗಿರೀಶ್ ಅವರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post