ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಅ.28ರ ನಾಳೆ ಶಾಸಕ ಬಿ.ಕೆ. ಸಂಗಮೇಶ್ವರ್ ಅವರ ಜನ್ಮದಿನವಾಗಿದ್ದು, ಈ ಬಾರಿ ಆಚರಣೆ ಮಾಡದೇ ಇರಲು ಅವರ ನಿರ್ಧರಿಸಿದ್ದಾರೆ.
ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ಅವರು, ಕೊರೋನಾ ಹಾವಳಿಯಿಂದ ಜನರು ಬಹಳಷ್ಟು ಸಂಕಷ್ಟ ಅನುಭವಿಸಿದ್ದಾರೆ. ಆರೋಗ್ಯದ ವಿಚಾರ ಮಾತ್ರವಲ್ಲ ಆರ್ಥಿಕವಾಗಿಯೂ ಸಹ ಕ್ಷೇತ್ರದ ಜನತೆ ತೀವ್ರ ತೊಂದರೆ ಅನುಭವಿಸಿದ್ದು, ಅದು ಇಂದಿಗೂ ಸಹ ಮುಂದುವರೆದಿದೆ. ಇಂತಹ ಸಂದರ್ಭದಲ್ಲಿ ಜನ್ಮ ದಿನವನ್ನು ಆಚರಿಸಿಕೊಳ್ಳಲು ನನಗೆ ಮನಸ್ಸಿಲ್ಲ ಎಂದರು.
ಜನರ ಹಿತವೇ ನನ್ನ ಗುರಿ. ಹೀಗಾಗಿ, ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಜನ್ಮದಿನ ಆಚರಣೆ ಮಾಡುವುದು ಬೇಡ ಎಂದು ರದ್ದು ಮಾಡಲು ಕೋರುತ್ತಿದ್ದೇನೆ. ಹೀಗಾಗಿ, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಮನೆಗೆ ಬಂದು ಶುಭ ಕೋರುವ ಬದಲಾಗಿ ನಿಮ್ಮ ಮನೆಗಳಲ್ಲೇ ದೇವರಿಗೆ ಪೂಜೆ ಸಲ್ಲಿಸಿ, ಪ್ರಾರ್ಥಿಸಿ. ಆ ಮೂಲಕ ನಮ್ಮನ್ನು ಆರ್ಶೀವದಿಸಿ ಎಂದು ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post