ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಆತ್ಮಹತ್ಯೆಗೆ ಶರಣಾಗಿರುವ ವಿಧಾನ ಪರಿಷತ್ ಉಪಸಭಾಪತಿ ಧರ್ಮೇಗೌಡ ಅವರ ಸಾವಿಗೆ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಉಪಾಧ್ಯಕ್ಷರಾದ ಎಸ್. ದತ್ತಾತ್ರಿ ಅವರು ಸಂತಾಪ ಸೂಚಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮೃತ ಧರ್ಮೇಗೌಡರು ಸಕರಾಯಪಟ್ಟಣದ ದಿವಂಗತ ಮಾಜಿ ಶಾಸಕ ಎಸ್.ಆರ್ ಲಕ್ಷ್ಮಯ್ಯನವರ ಪುತ್ರ. ಇವರು ಜಿ.ಪಂ.ಸದಸ್ಯರಾಗಿ, ಶಾಸಕರಾಗಿ, ಡಿ.ಸಿ.ಸಿ ಬ್ಯಾಂಕ್’ನ ನಿರ್ದೇಶಕರಾಗಿ, ವಿಧಾನ ಪರಿಷತ್ ನ ಉಪ ಸಭಾಪತಿಯಾಗಿಯೂ ಅಧ್ಯಕ್ಷರಾಗಿ ಸೇವೆ ಸಲ್ಲಿದ್ದ ಅವರ ಸೇವೆಯನ್ನು ಪರಿಗಣಿಸಿ ಸಹಕಾರಿ ರತ್ನ ಎಂಬ ಪ್ರಶಸ್ತಿಗೂ ಭಾಜನರಾಗಿದ್ದರು ಎಂದು ನೆನೆದಿದ್ದಾರೆ.
ಈಗ ಇವರು ಪತ್ನಿ ಮಮತ, ಮಗ ಸೋನಾಲ್, ಮಗಳು, ಸಾಲೋ ನಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಇವರೆಲ್ಲರಿಗೂ ಧರ್ಮಗೌಡರ ಅಗಲಿಕೆಯ ನೋವನ್ನು ಸಂತೈಸುವ ಶಕ್ತಿ ಆ ದೇವರು ದಯಪಾಲಿಸಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post