ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿನೋಬನಗರದ ತರಕಾರಿ ಮಾರುಕಟ್ಟೆ ಕಟ್ಟೆ ಸುಬ್ಬಣ್ಣ ಸ್ಟಾಂಡ್ ಬಳಿಯ ಪುಸ್ತಕ ಹಾಗೂ ಸ್ಟೇಷನರಿ ಅಂಗಡಿ ರಾತ್ರಿಯಿಡೀ ಬೆಂಕಿ ಹೊತ್ತಿ ಉರಿದಿದೆ.

Also Read: ಸಜ್ಜನ ರಾಜಕಾರಣಿ, ಎಂಎಲ್’ಸಿ ಡಿ.ಎಸ್. ಅರುಣ್’ಗೆ ಬೆದರಿಕೆ: ದೂರು ದಾಖಲು
ಇಲ್ಲಿನ ಶಾರದಾ ಬುಕ್ ಹೌಸ್ ನಲ್ಲಿ ಈ ಬೆಂಕಿ ದುರಂತ ಸಂಭವಿಸಿದ್ದು ಸುಮಾರು ಐದು ಲಕ್ಷ ರೂ. ಬೆಲೆಬಾಳುವ ಝೆರಾಕ್ಸ್ ಮಿಷನ್, ಕಂಪ್ಯೂಟರ್ಸ್, ಪುಸ್ತಕಗಳು, ನೋಟ್ ಬುಕ್ ಗಳು, ಸ್ಟೇಷನರಿ ಅಂದರೆ ಪೆನ್ನು, ಪೆನ್ಸಿಲ್, ಜಾಮಿಟ್ರಿ ಬಾಕ್ಸ್ ಸೇರಿದಂತೆ ಅಪಾರ ಬಗೆಯ ವಸ್ತುಗಳು ಸಂಪೂರ್ಣ ಭಸ್ಮವಾಗಿವೆ ಎಂದರೆ ರಾತ್ರಿಯಿಡೀ ಬೆಂಕಿ ಉರಿದದ್ದಕ್ಕೆ ಸಾಕ್ಷಿ ಎಂಬಂತಿದೆ.
Also Read: ಶಿವಮೊಗ್ಗ-ಶಂಕರ ಮಠ ರಸ್ತೆಯಲ್ಲಿ ವ್ಯಕ್ತಿಯೊಬ್ಬನಿಗೆ ಚಾಕು ಇರಿತ: ಕಾರಣವೇನು?
ಬೆಳಗಿನ ಜಾವವೂ ಬೆಂಕಿ ಇನ್ನೂ ಹೊಗೆಯಾಡುತ್ತಿತ್ತು. ಬೆಳಗ್ಗೆ ಹೋಗಿ ನೋಡಿದ ಪಕ್ಕಡ ಮಳಿಗೆಯವರು ಬುಕ್ ಸ್ಟಾಮ್’ನ ವಿನಯಕುಮಾರ್ ಅವರಿಗೆ ಮಾಹಿತಿ ನೀಡಿದ್ದು, ಸ್ಥಳಕೆ ಅಗ್ನಿಶಾಮಕದಳ ಸಿಬ್ಬಂದಿಗಳು ಬಂದು ಬೆಂಕಿ ನಂದಿಸಿದ್ದಾರೆ. ಮಳಿಗೆಯ ಶೇ. 80ರಷ್ಟು ವಸ್ತುಗಳು ಭಸ್ಮವಾಗಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















