ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿನೋಬ ನಗರದ ಪೊಲೀಸ್ ಚೌಕಿ ಬಳಿಯ 60 ಅಡಿ ರಸ್ತೆಯಲ್ಲಿ ಸಿದ್ದವಾಗಿರುವ ಜಿಎಫ್’ಸಿ ಹೊಟೇಲ್ ಮಾರ್ಚ್ 17ರಂದು ಲೋಕಾರ್ಪಣೆಗೊಳ್ಳಲಿದೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಹೊಟೇಲ್ ಮಾಲಿಕ ಪಿ.ಕೆ. ರಘುನಂದನ್, ನಾಳೆ ಸಂಜೆ 6 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಹೊಟೇಲ್ ಉದ್ಘಾಟನೆಗೊಳ್ಳಲಿದ್ದು, ಮನೆ ಮಾದರಿಯಲ್ಲಿ ವೆಜ್ ಹಾಗೂ ನಾನ್ ವೆಜ್ ಬಿರಿಯಾನಿ ನಮ್ಮ ಮೆನುವಿನ ವಿಶೇಷವಾಗಿದೆ ಎಂದರು.
ಮಾರ್ಚ್ 16ರಂದು ಬಿರಿಯಾನಿ ಹಬ್ಬ ಆಚರಿಸಲಾಗುವುದು. ಅಂದು ಒಂದು ಬಿರಿಯಾನಿ ತೆಗೆದುಕೊಂಡರೆ ಮತ್ತೊಂದನ್ನು ಉಚಿತವಾಗಿ ನೀಡಲಾಗುವುದು. ಒಗ್ಗರಣೆ ಡಬ್ಬಿ ಖ್ಯಾತಿಯ ಕೃಷ್ಣಪ್ಪನವರ ಹೋಟೆಲ್ ಇದಾಗಿದೆ. ಈಗಾಗಲೇ ದೇಶದಲ್ಲಿ 200ಕ್ಕೂ ಹೆಚ್ಚು ಈ ರೀತಿಯ ಹೋಟೆಲ್ ಗಳು ಆರಂಭಗೊಂಡಿದೆ. ಶಿವಮೊಗ್ಗದಲ್ಲಿಯೂ ಕೂಡ ಈಗ ಆರಂಭಿಸಲಾಗುತ್ತಿದೆ. ಗುರುವಾರದಂದು ಕೃಷ್ಣಪ್ಪನವರು ಈ ಹೋಟೆಲ್ ಅನ್ನು ಉದ್ಘಾಟಿಸುವರು ಎಂದರು.
ನಮ್ಮಲ್ಲಿನ ಬಿರಿಯಾನಿ ಅತ್ಯಂತ ರುಚಿಕರವಾಗಿರುತ್ತದೆ. ಮನೆ ಮಾದರಿಯದ್ದಾಗಿರುತ್ತದೆ. ಯಾವುದೇ ರೀತಿಯ ರಾಸಾಯನಿಕ ಅಂಶಗಳು ಇರುವುದಿಲ್ಲ. ಸಂಪೂರ್ಣ ಮನೆಯಲ್ಲೇ ತಯಾರಿಸಿದ ಅಡಿಗೆಯಾಗಿರುತ್ತದೆ. ಚಿಕನ್ ಬಿರಿಯಾನಿಗೆ 100 ರೂ., ಮಟನ್ ಬಿರಿಯಾನಿಗೆ 150 ರೂ., ಅರ್ಧ ಕಬಾಬ್ ಗೆ 50 ರೂ., ಪೂರ್ತಿ ಕಬಾಬ್’ಗೆ 100 ರೂ., 1 ಕೆಜಿ ಕಬಾಬ್ ಗೆ 500ರೂ.ಗಳನ್ನು ನಿಗಧಿಪಡಿಸಲಾಗಿದೆ. 30 ನಿಮಿಷಕ್ಕೆ ಮೊದಲು ಆರ್ಡರ್ ಮಾಡಿದರೆ, ಹೋಂ ಡೆಲೆವರಿ ಕೂಡ ಇರುತ್ತದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post