ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಜರಂಗದಳ ಕಾರ್ಯಕರ್ತ ಹರ್ಷನ ಭೀಕರ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಉಳಿದವರ ಪತ್ತೆಯಾಗಿ ಕಾರ್ಯಾಚರಣೆ ನಡೆದಿದೆ.
Also Read: ಶಿವಮೊಗ್ಗ: ಹರ್ಷ ಕೊಲೆ ಪ್ರಕರಣ ಎನ್‌ಐಎ ತನಿಖೆಯಾಗಲಿ : ಸಚಿವ ಈಶ್ವರಪ್ಪ ಆಗ್ರಹ
ಬಂಧಿತ ಆರೋಪಿಗಳನ್ನು ಬುದ್ದನಗರದ ಖಾಸಿಫ್(30) ಹಾಗೂ ಜೆಪಿ ನಗರದ ಸೈಯ್ಯದ್ ನಧೀಂ(20) ಎಂದು ಗುರುತಿಸಲಾಗಿದ್ದು, ತೀವ್ರತರವಾದ ವಿಚಾರಣೆಗೆ ಇವರನ್ನು ಒಳಪಡಿಸಲಾಗಿದೆ.

Also Read: ಶಿವಮೊಗ್ಗದಲ್ಲಿ ಇಂದು ರಾತ್ರಿಯಿಂದ ಬುಧವಾರ ಮುಂಜಾನೆವರೆಗೂ ಕರ್ಫ್ಯೂ ಜಾರಿ
ಅಹಿತಕರ ಘಟನೆ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಬೆಂಗಳೂನಿಂದ ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ನಗರಕ್ಕೆ ಕರೆಸಿಕೊಳ್ಳಲಾಗುತ್ತಿದೆ. ಈಗಾಗಲೇ ನಗರದ ಹಲವು ಪ್ರದೇಶಗಳಲ್ಲಿ ಕೆಎಸ್’ಆರ್’ಪಿ ಹಾಗೂ ಆರ್’ಎಎಫ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post