ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕುರುಬರ ಎಸ್’ಟಿ ಮೀಸಲಾತಿ ಹೋರಾಟಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಬರದೇ ಇದ್ದರೆ ಸ್ವಾಮಿಗಳ ನೇತೃತ್ವದಲ್ಲೇ ನಮ್ಮ ಹೋರಾಟ ಮುಂದವರೆಯಲಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೋರಾಟಕ್ಕೆ ಸಿದ್ದರಾಮಯ್ಯನವರಿಗೆ ಖುದ್ಧು ಕನಕ ಪೀಠದ ಕನಕಾನಂದ ಸ್ವಾಮಿಗಳೇ ಸ್ವತಃ ಕರೆದಿದ್ದೂ ನಮ್ಮ ಸಮಾವೇಶಕ್ಕೆ ಯಾಕೆ ಬಂದಿಲ್ಲ ಎಂದು ತಿಳಿದಿಲ್ಲ. ನಮ್ಮ ಹೋರಾಟದೊಂದಿಗೆ ಅವರು ಬಂದರೆ ಸರಿ. ಒಂದು ವೇಳೆ ಅವರು ಬಾರದೇ ಇದ್ದರೆ ಶ್ರೀಗಳ ನೇತೃತ್ವದಲ್ಲೇ ಹೋರಾಟ ಮುಂದುವರೆಯಲಿದೆ ಎಂದರು.
ಇನ್ನು, ಕುರುಬರ ಎಸ್’ಟಿ ಹೋರಾಟ ಸಮಿತಿಯ ನಿಯೋಗದ ವತಿಯಿಂದ ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post