ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಗರ: ಸದ್ಯದ ಪರಿಸ್ಥಿತಿಗೆ ಯಾವುದೇ ಇಲಾಖೆಯಲ್ಲಿ ಅಧಿಕಾರಿಗಳಿಂದ ಕೆಲಸ ಮಾಡಿಸಿಕೊಳ್ಳುವುದು ಜನಸಾಮಾನ್ಯರಿಗೆ ಅಷ್ಟೊಂದು ಸುಲಭದ ಕೆಲಸವಲ್ಲ ಆದರೆ ಇಲ್ಲೊಬ್ಬ ಅಧಿಕಾರಿಯೂ ತಾಲೂಕಿನ ರೈತರಿಗೆ ಮಾದರಿಯಾಗಿದ್ದಾರೆ.
ಸಾಗರ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಕಾಶಿನಾಥ್ ಅವರು ಇದೀಗ ಸಾಮಾನ್ಯ ರೈತರ ಮೆಚ್ಚುಗೆಯ ಅಧಿಕಾರಿ. ಇವರ ಕೆಲಸ ಕಾರ್ಯಗಳು ಹಾಗೂ ಸೇವೆಯು ಇದೀಗ ತಾಲೂಕಿನ ಜನತೆಯ ಮನ ಮುಟ್ಟುತ್ತಿದೆ. ಯಾವುದೇ ಯೋಜನೆಗಳು ಅನುಷ್ಠಾನಕ್ಕೆ ಬಂದ ತಕ್ಷಣವೇ ರೈತರಿಗೆ ಸಿಗುತ್ತಿದ್ದು ಇದೀಗ ರೈತರು ಫುಲ್ ಖುಷಿಯಾಗಿದ್ದಾರೆ.
ಇವರಿಗೆ ಯಾವುದೇ ಸಮಯದಲ್ಲಿ ಕರೆ ಮಾಡಿದರೆ ಉತ್ತಮ ಮಾಹಿತಿ ಹಾಗೂ ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ರೈತರ ಮಾತಾಗಿದೆ.
ಕಾಶಿನಾಥ್ ಅವರು ರೈತ ಸ್ನೇಹಿ ಅಧಿಕಾರಿಯಾಗಿದ್ದು ಇವರ ಕೆಲಸ ಕಾರ್ಯಗಳಿಂದ ತಾಲೂಕಿನಾದ್ಯಂತ ರೈತರ ವಿಶ್ವಾಸ ಹಾಗೂ ಪ್ರೀತಿ ಗೆದ್ದಿರುವ ಅಧಿಕಾರಿಯಾಗಿದ್ದಾರೆ.
ಇವರು ಸಾಗರ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾಗಿ ಅಧಿಕಾರ ಹಿಡಿದು ಕೇವಲ ಒಂದು ವರ್ಷದಲ್ಲಿ ತಮ್ಮ ಕೆಲಸ ಕಾರ್ಯಗಳಿಂದ ಸಾವಿರಾರು ಜನ ರೈತರ ರೈತ ಸ್ನೇಹಿ ಅಧಿಕಾರಿಯಾಗಿರುವುದು ನಿಜಕ್ಕೂ ಶ್ಲಾಘನೀಯ.
ಇಂತಹ ಅಧಿಕಾರಿಯನ್ನು ಕಂಡ ರೈತರು ನಮ್ಮ ತಾಲೂಕಿಗೆ ಇಂತಹ ಅಧಿಕಾರಿಗಳು ಹೆಚ್ಚೆಚ್ಚು ಬರಲಿ ಎಂದು ಆಶಿಸುತ್ತಿದ್ದಾರೆ ಹಾಗೂ ಎಲ್ಲ ಇಲಾಖೆಯಲ್ಲೂ ಇಂತಹ ಅಧಿಕಾರಿಗಳು ಬಂದು ಜನಸ್ನೇಹಿ ಅಧಿಕಾರಿಗಳಾಗಿ ಜನತೆಯ ಸೇವೆ ಮಾಡಲಿ ಎಂಬುದೇ ನಮ್ಮ ಆಶಯ.
(ವರದಿ: ಪವನ್ ಕುಮಾರ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post