ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಸಂತಸ ಮೂಡಿಸಿದೆ ಎಂದು ವಿಧಾನ ಪರಿಷತ್ ಮಾಜಿ ಸಭಾಧ್ಯಕ್ಷ ಡಿ.ಎಚ್. ಶಂಕರಮೂರ್ತಿ ಹೇಳಿದ್ದಾರೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿನ ಹಿನ್ನೆಲೆಯಲ್ಲಿ ಮಾತನಾಡಿರುವ ಅವರು, ತೀರ್ಪು ನಿರೀಕ್ಷಿತವಾಗಿತ್ತು. ಏಕೆಂದರೆ ಆರೋಪಿತರ್ಯಾರು ಮಸೀದಿ ಧ್ವಂಸಕ್ಕೆ ಕರ ಸೇವಕರಿಗೆ ಪ್ರಚೋದನೆ ನೀಡಿಲ್ಲ. ಇಂದಿನ ತೀರ್ಪಿನಿಂದ ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಸೇರಿದಂತೆ ಅನೇಕರಿಗೆ ಸಂತಸವಾಗಿದೆ ಎಂದಿದ್ದಾರೆ.
ಅಯೋಧ್ಯೆಯಂತೆಯೇ ಮುಂದಿನ ದಿನಗಳಲ್ಲಿ ಮಥುರಾ ಮತ್ತು ಕಾಶಿ ದೇವಸ್ಥಾನಗಳೂ ಅನ್ಯ ಧರ್ಮಿಯರು ಕಟ್ಟಿರುವ ಕಟ್ಟಡಗಳಿಂದ ಮುಕ್ತವಾಗಬೇಕು: ಡಿ.ಎಚ್. ಶಂಕರಮೂರ್ತಿ
Posted by Kalpa News on Wednesday, 30 September 2020
ತೀರ್ಪನ್ನು ಸ್ವಾಗತಿಸಿದ ಅವರು, ನಾನೂ ಸಹ ಎರಡು ಬಾರಿ ಕರ ಸೇವೆಯಲ್ಲಿ ಭಾಗವಹಿಸಿದ್ದೆ. ಕಟ್ಟಡದ ಬಳಿ ಯಾರೂ ಬರಬೇಡಿ ಎಂದು ನಾಯಕರು ಹೇಳುತ್ತಿದ್ದರು ಎಂದು ನೆನಪಿಸಿಕೊಂಡರು.
ಅಯೋಧ್ಯೆಯಂತೆಯೇ ಮುಂದಿನ ದಿನಗಳಲ್ಲಿ ಮಥುರಾ ಮತ್ತು ಕಾಶಿ ದೇವಸ್ಥಾನಗಳೂ ಅನ್ಯ ಧರ್ಮಿಯರು ಕಟ್ಟಿರುವ ಕಟ್ಟಡಗಳಿಂದ ಮುಕ್ತವಾಗಬೇಕು ಎಂದ ಅವರು, ಬಿಜೆಪಿ ಮೊದಲಿಂದಲೂ ಅಯೋಧ್ಯೆ, ಮಥುರಾ ಹಾಗೂ ಕಾಶಿಯಲ್ಲಿರುವ ಅನ್ಯ ಧರ್ಮದವರ ಅಕ್ರಮ ನಿರ್ಮಾಣದ ಕುರಿತು ಒತ್ತಾಯಿಸುತ್ತಲೇ ಬಂದಿದೆ ಎಂದರು.
ರಾಜ್ಯಾಂಗದ ಕರ್ತವ್ಯ ಕುರಿತು ಮಾತನಾಡುವವರು ಹಾಗೂ ತೀರ್ಪನ್ನು ಒಪ್ಪದವರು ನ್ಯಾಯಾಂಗದ ಮೊರೆ ಹೋಗಬಹುದು ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post