ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನೂತನ ಮೇಯರ್ ಆಗಿ ಸುನೀತಾ ಅಣ್ಣಪ್ಪ ಹಾಗೂ ಉಪಮೇಯರ್ ಆಗಿ ಶಂಕರ್ ಗನ್ನಿ ಅವರನ್ನೂ ಆಯ್ಕೆ ಮಾಡುವಂತೆ ಇಂದು ಬೆಳಿಗ್ಗೆ ಬಿಜೆಪಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಈ ಮೂಲಕ ಗೊಂದಲ ಮೂಡಿಸಿದ್ದ ಉಪಮೇಯರ್ ಆಯ್ಕೆಗೆ ತೆರೆಬಿದ್ದಿದೆ.
ಮೇಯರ್ ಸ್ಥಾನಕ್ಕೆ ಸುನೀತಾ ಅಣ್ಣಪ್ಪನವರ ಆಯ್ಕೆ ನಿಶ್ಚಿತವಾಗಿತ್ತಾದರು, ಉಪಮೇಯರ್ ಸ್ಥಾನವನ್ನು ಸಾಮಾನ್ಯ ಅಭ್ಯರ್ಥಿ ಎಂದು ಘೋಷಿಸಿರುವ ಹಿನ್ನಲೆಯಲ್ಲಿ ಹಲವು ಹೆಸರುಗಳು ಕೇಳಿಬಂದಿದ್ದವು. ಉಪಮೇಯರ್ ಸ್ಥಾನಕ್ಕೆ ನಾನು ಪೈಪೋಟಿ ಅಲ್ಲವೆಂಬ ಗನ್ನಿಯವರ ಹೇಳಿಕೆಯೂ ಸಹ ಆ ಸ್ಥಾನಕ್ಕೆ ಹಲವು ಹೆಸರುಗಳು ಸ್ಪರ್ಧಿಸುವ ಹೆಸರು ಕೇಳಿಬಂದಿದ್ದವು. ಆದರೆ ಈ ನಿರ್ಣಯ ಪೂರ್ವಭಾವಿ ಸಭೆಯಲ್ಲಿ ನಿವಾರಣೆ ಆಗಿದೆ. ಗನ್ನಿಯವರಿಗೆ ಉಪಮೇಯರ್ ಸ್ಥಾನಕ್ಕೆ ಒಪ್ಪಿಕೊಂಡಿರುವ ಹಿನ್ನಲೆಯಲ್ಲಿ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಅವಿರೋಧ ಆಯ್ಕೆ ಆಗಲಿದೆ ಎನ್ನಲಾಗಿದೆ.
ಇಂದು ಬೆಳಿಗ್ಗೆ 9 ಗಂಟೆಗೆ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಕೆ ಮಾಡಿದ್ದು, ಬಿಜೆಪಿಯ ಸದಸ್ಯರುಗಳು ೨೧ ಜನರಿರುವುದರಿಂದ ಚುನಾವಣೆ ಪ್ರಕ್ರಿಯೆ ನಡೆಯಲಿದ್ದು, ಎಲ್ಲಾ ಆಯ್ಕೆಯು ಅವಿರೋಧವಾಗಿ ನಡೆಯಲಿದೆ. 9 ರಿಂದ 11 ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶಗಳಿವೆ. 11-12 ರವರೆಗೆ ನಾಮ ಪತ್ರ ಹಿಂಪಡೆಯಲು ಅವಕಾಶಗಳಿದ್ದು, 1 ಗಂಟೆಗೆ ಆಯ್ಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post