ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಟ್ಯಾಂಕ್ ದುರಸ್ಥಿ ಕಾಮಗಾರಿ ನಡೆಯುವುದರಿಂದ ಅ.8ರ ನಾಳೆಯಿಂದ 10ರವರೆಗೂ ಅಂದರೆ ಮೂರು ದಿನಗಳ ಕಾಲ ಹಲವು ಪ್ರದೇಶಗಳಲ್ಲಿ ನೀರು ಸರಬರಾಜು ಇರುವುದಿಲ್ಲ.
ಈ ಕುರಿತಂತೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಮಾಹಿತಿ ಬಿಡುಗಡೆ ಮಾಡಿದ್ದು, ಸಾರ್ವಜನಿಕರು ಸಹಕಾರ ನೀರುವಂತೆ ಕೋರಿದ್ದಾರೆ.
ಎಲ್ಲೆಲ್ಲಿ ನೀರು ಸರಬರಾಜು ವ್ಯತ್ಯಯ?
ಹೊಸಮನೆ ಶಿವಶಂಕರ್ ಗ್ಯಾರೇಜ್ ಕೆಳಭಾಗದ ರಸ್ತೆಗಳು, ವಜ್ರೇಶ್ವರಿ ಕನ್ನಡ ಸಂಘ ರಸ್ತೆ ಎಡ-ಬಲ ಭಾಗದ ಅಡ್ಡ ರಸ್ತೆಗಳು, ಶರಾವತಿ ನಗರ ಬಿ ಬ್ಲಾಕ್, ಕುವೆಂಪು ರಸ್ತೆ, ಬಿಎಸ್‌ಎನ್‌ಎಲ್ ಕ್ವಾಟ್ರಾಸ್‌ನಿಂದ ಜೈಲ್ ಸರ್ಕಲ್‌ವರೆಗೆ, ಮಿಷನ್ ಕಾಂಪೌಂಡ್ ಏರಿಯಾ, ದುರ್ಗಿಗುಡಿ 1ರಿಂದ 5ನೇ ಕ್ರಾಸ್‌ವರೆಗೆ, ದುರ್ಗಿಗುಡಿ ಪಾರ್ಕ್ ಬಡಾವಣೆ, ಜಿಪಿಎನ್ ಅಡ್ಡರಸ್ತೆಗಳು, ಗಾರ್ಡನ್ ಏರಿಯಾದ ಒಂದರಿಂದ ಮೂರನೆಯ ಅಡ್ಡರಸ್ತೆಯಲ್ಲಿನ ಪ್ರದೇಶಗಳು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















