ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರತಿ ವರ್ವದಂತೆ ಈ ಬಾರಿಯು ಕೂಡ ಶಿವಮೊಗ್ಗ ರೌಂಡ್ ಟೇಬಲ್ 166 ಘಟಕ ಹಾಗೂ ಸರ್ಜಿ ಫೌಂಡೇಶನ್ #SurgeryFoundation ಸಂಯುಕ್ತಾಶ್ರಯಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಕಿಡ್ಸ್ ಫಿಯೆಸ್ಟಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ನ.13ರ ಬುಧವಾರ ಬೆಳಗ್ಗೆ 11 ಗಂಟೆಗೆ ನಗರದ ಕಂಟ್ರಿ ಕ್ಲಬ್ ನಲ್ಲಿ ಕಿಡ್ಸ್ ಫಿಯೆಸ್ಟಾ #KidsFiesta ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಹೆಸರಾಂತ ವೈದ್ಯರು ಹಾಗೂ ಸಮಾಜ ಸೇವಕರಾದ ಡಾ.ಪಿ. ನಾರಾಯಣ್, ಖ್ಯಾತ ನರರೋಗ ತಜ್ಞರು ಹಾಗೂ ಅಭಿವೃದ್ಧಿ ಸಂಸ್ಥೆಯ ಸಂಸ್ಥಾಪಕರಾದ ಡಾ.ಶಿವರಾಮಕೃಷ್ಣ, ಖ್ಯಾತ ಮನೋರೋಗ ತಜ್ಞರಾದ ಡಾ.ಕೆ.ಆರ್. ಶ್ರೀಧರ್, ಕಂಟ್ರಿಕ್ಲಬ್ ಅಧ್ಯಕ್ಷರಾದ ನಾಗರಾಜ್, ರೌಂಡ್ ಟೇಬಲ್ ಛೇರ್ಮನ್ ಆದಿತ್ಯ ಆಚಾರ್ಯ, ವೈಸ್ ಛೇರ್ಮನ್ ಈಶ್ವರ್ ಸರ್ಜಿ, ಕಾರ್ಯದರ್ಶಿ ಗುರು ಹಂಜಿ, ಕಾರ್ಯಕ್ರಮದ ಸಂಚಾಲಕರಾದ ಡಾ.ಸ್ವರೂಪ್ ಮಲ್ಲಿಕ್, ಪ್ರದೀಪ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ನಾನಾ ಶಾಲೆಗಳ ವಿಶೇಷಚೇತನರು, ಬುದ್ಧಿಮಾಂದ್ಯ ಮಕ್ಕಳು ವಿವಿಧ ಆಟೋಟ, ಹಾಡು, ನೃತ್ಯಗಳನ್ನು ನಡೆಸಿಕೊಡುವರು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















