ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದಲ್ಲಿ ಹೇರಲಾಗಿರುವ ಸೆಕ್ಷನ್’ನಿಂದಾಗಿ ವ್ಯಾಪಾರ ವಹಿವಾಟಿಗೆ ತೊಂದರೆಯಾಗುತ್ತಿದ್ದು, ಬೆಳಗ್ಗೆ 7ರಿಂದ ಸಂಜೆ 5ರವರೆಗೂ ಅವಕಾಶ ನೀಡುವಂತೆ ನಗರದ ವಾಣಿಜ್ಯೋದ್ಯಮಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಕುರಿತಂತೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘಟನೆಯ ಸದಸ್ಯರು, ಕಳೆದೊಂದು ವಾರದಿಂದ ನಗರದಲ್ಲಿ ಹೇರಲಾಗಿರುವ ಸೆಕ್ಷನ್ ಹಾಗೂ ಕರ್ಫ್ಯೂನಿಂದಾಗಿ ವ್ಯಾಪಾರ ವಹಿವಾಟಿಗೆ ತೊಂದರೆಯಾಗಿದ್ದು, ಇದು ಆರ್ಥಿಕವಾಗಿ ನಷ್ಟವುಂಟು ಮಾಡುತ್ತಿದೆ. ಈಗಾಗಲೇ ಕೋವಿಡ್19 ಲಾಕ್ ಡೌನ್’ನಿಂದಾಗಿ ಬಹಳಷ್ಟು ನಷ್ಟವುಂಟಾಗಿದೆ. ಇಂತಹ ಸಂದರ್ಭದಲ್ಲಿ ಈ ರೀತಿ ಸೆಕ್ಷನ್ ಹಾಕಿರುವುದು ತೊಂದರೆಯುಂಟಾಗಿದೆ ಎಂದರು.
ನಗರದ ವ್ಯಾಪಾರ ವಹಿವಾಟಿಗೆ ಉಂಟಾಗಿರುವ ತೊಂದರೆಯನ್ನು ನಿವಾರಿಸಿ, ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ವ್ಯವಹಾರಕ್ಕೆ ಅವಕಾಶ ಕಲ್ಪಿಸಿ ಎಂದು ಕೋರಿದ್ದಾರೆ.










Discussion about this post