ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಉಡುಪಿ ಪೇಜಾವರ ಅಧೋಕ್ಷಜ ಮಠದ ಪರಮಪೂಜ್ಯ ವಿಶ್ವೇಶತೀರ್ಥ ಶ್ರೀಪಾದಂಗಳವರ ಪುಣ್ಯಸ್ಮರಣೆ ಅಂಗವಾಗಿ ನಗರದಲ್ಲಿ ಜನವರಿಯ ಈ ತಿಂಗಳಿನಲ್ಲಿ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಭಜನಾ ಪರಿಷತ್ ದಶಮಾನೋತ್ಸವದ ಸುಸಂದರ್ಭ ಹಾಗೂ ಪೇಜಾವರ ಶ್ರೀಗಳ ಪುಣ್ಯ ಸ್ಮರಣೆಯ ಅಂಗವಾಗಿ ಮತ್ತು ಲೋಕಕಲ್ಯಾಣಾರ್ಥವಾಗಿ ಶ್ರೀರಾಮನಾಮ ತಾರಕ ಜಪ ಯಜ್ಞ (ಸೂರ್ಯ ಉದಯದಿಂದ ಸೂರ್ಯಾಸ್ತವರೆಗೆ) ಬೆಳಿಗ್ಗೆ 8 ರಿಂದ ಸಂಜೆ 8ರ ವರೆಗೆ ನಡೆಯಲಿದೆ.

ಈ ಅಂಗವಾಗಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಿರಂತರ ಶ್ರೀರಾಮತಾರಕ ಜಪಯಜ್ಞವನ್ನು ನಡೆಸಲು ಸಂಕಲ್ಪಿಸಿದ್ದು ಈ ಪರಮ ಪುಣ್ಯ ಕಾರ್ಯವನ್ನು ನಗರದ ಪ್ರಸಿದ್ಧ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವರ ಸನ್ನಿಧಾನದಲ್ಲಿ ಜ.28ರಿಂದ ಬೆಳಗ್ಗೆ 8ರಿಂದ ರಾತ್ರಿ 8 ರವರೆಗೂ ಮಾಡಲು ಉದ್ದೇಶಿಸಲಾಗಿದೆ.

ಸಮಯದ ವಿವರ ಹೀಗಿದೆ:
- ಸಮಯ 8ರಿಂದ 10 1ನೇ ಅವಧಿ
- ಸಮಯ 10ರಿಂದ 12 2ನೇ ಅವಧಿ
- ಸಮಯ 12 ರಿಂದ 2 3ನೇ ಅವಧಿ
- ಸಮಯ 2 ರಿಂದ 4 4ನೇ ಅವಧಿ
- ಸಮಯ 4 ರಿಂದ 6 5 ನೇ ಅವಧಿ
- ಸಮಯ 6 ರಿಂದ 8 6 ನೇ ಅವಧಿ
ಪ್ರತಿ ಅವಧಿಗೂ ಕನಿಷ್ಠ 10 ಭಜನಾ ತಂಡಗಳಿಗೆ ಅವಕಾಶವಿದ್ದು, ಪ್ರತಿ ಅವಧಿಗೂ ಸಂಗೀತ ವಿದ್ವಾಂಸರು ವಿವಿಧ ರಾಗಗಳ ಮೂಲಕ ಶ್ರೀರಾಮನಾಮ ತಾರಕ ಜಪ ಯಜ್ಞ ನಡೆಸುವರು.
ಶಿವಮೊಗ್ಗ ನಗರದಲ್ಲಿ ಪ್ರಥಮವಾಗಿ ವಿಶೇಷ ಕಾರ್ಯಕ್ರಮ ಆಯೋಜನೆ ಇದಾಗಿದೆ. ಅಂದು ಸಂಜೆ ಕಾರ್ಕಳದ ಪ್ರಸಿದ್ಧ ಭಜನ್ ಗಾಯಕರಾದ ಶ್ರೀ ಸುದರ್ಶನ್ ಕುಂಜತ್ತಾಯ ತಂಡದವರಿಂದ ಪವನಪುತ್ರ ಹನುಮನ ಕೀ ಜೈ ವಿಶೇಷ ಭಜನಾ ಕಾರ್ಯಕ್ರಮ ಸಹ ಏರ್ಪಡಿಸಲಾಗಿದೆ.
ಇಂತಹ ಪರಮ ಪುಣ್ಯ ಕಾರ್ಯಕ್ರಮಕ್ಕೆ ಸಮಸ್ತ ಭಜನಾ ಮಂಡಳಿ ಮಾತೆಯರು ತಮ್ಮ ತಮ್ಮ ತಂಡದ ಎಲ್ಲಾ ಮಾತೆಯರ ಜೊತೆಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸರ್ವ ರೀತಿಯ ಸಹಕಾರವನ್ನು ನೀಡಿ ಭಗವಂತನ ಸದ್ಗುರುಗಳ ಆಶೀರ್ವಾದಕ್ಕೆ ಪಾತ್ರರಾಗಬೇಕಾಗಿ ವಿನಂತಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post