ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಉತ್ತರ ಹಾಗೂ ದಕ್ಷಿಣ ಎಂದು ದೇಶ ವಿಭಜನೆಯ ಮಾತನ್ನಾಡಿದ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ #DKSuresh ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಹಿಗ್ಗಾಮುಗ್ಗಾ ಚಾಟಿ ಬೀಸಿದರು.
ನಗರದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕದ #Karnataka ಒಬ್ಬ ಸಂಸದ ದೇಶವನ್ನು ಒಡೆಯುವ ಮಾತನಾಡಿದ್ದ, ಅಂತಹ ಸಂಸದನನ್ನು ಪಕ್ಷದಿಂದ ತೆಗೆದು ಹಾಕುವ ಬದಲು ಕಾಂಗ್ರೆಸ್ ಆತನನ್ನು ಇನ್ನೂ ಇಟ್ಟುಕೊಂಡು, ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.ಬಿಜೆಪಿ #BJP ಎಂದಿಗೂ ದೇಶ ಒಡೆಯಲು ಬಿಡುವುದಿಲ್ಲ. ದೇಶ ವಿಭಜಕನ್ನು ಈ ಚುನಾವಣೆಯಲ್ಲಿ ಹುಡುಕಿ ಹುಡುಕಿ ಸ್ವಚ್ಛ ಮಾಡಬೇಕು. ಇದಕ್ಕೆ ಮೇ.7ರಂದು ನಿಮ್ಮ ಮತದಾನದ ಶಕ್ತಿ ಬಳಸಬೇಕು ಎಂದು ಕರೆ ನೀಡಿದರು.
Discussion about this post