No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Thursday, October 8, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ ಸೊರಬ

ಖಾಸಗಿಯವರ ಕಪಿಮುಷ್ಟಿಯಿಂದ ಆಗುಂಬೆ ಕಟ್ಟೆಕೊಪ್ಪ ಅರಣ್ಯ ರಕ್ಷಿಸಿ, ತಪ್ಪಿತಸ್ತರ ವಿರುದ್ಧ ಕ್ರಮ ಜರುಗಿಸಿ

ಅರಣ್ಯದಲ್ಲಿ ಕಾಮಗಾರಿ - ಭೂದಾಖಲೆ ತಿದ್ದುಪಡಿ ಆರೋಪ

kalpa News by kalpa News
March 26, 2023
in ಸೊರಬ
0
ಖಾಸಗಿಯವರ ಕಪಿಮುಷ್ಟಿಯಿಂದ ಆಗುಂಬೆ ಕಟ್ಟೆಕೊಪ್ಪ ಅರಣ್ಯ ರಕ್ಷಿಸಿ, ತಪ್ಪಿತಸ್ತರ ವಿರುದ್ಧ ಕ್ರಮ ಜರುಗಿಸಿ

(Representational Image)

Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಆಗುಂಬೆ/ಹೊಸನಗರ  |

ಆಗುಂಬೆ ಸನಿಹವಿರುವ ಹೊಸನಗರ ತಾಲೂಕು ಕಟ್ಟೆಕೊಪ್ಪ ಗ್ರಾಮದಲ್ಲಿ ಅಂದಾಜು 600 ಎಕರೆ ಅರಣ್ಯ ಭೂಮಿ ಖಾಸಗಿಯವರ ಕಪಿಮುಷ್ಟಿಯಲ್ಲಿ ಸಿಲುಕಿದ್ದು, ಇದನ್ನು ರಕ್ಷಣೆ ಮಾಡಬೇಕು ಎಂದು ಜೀವ ವೈವಿಧ್ಯ ಮಂಡಳಿ ನಿಕಟ ಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಆಗ್ರಹಿಸಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ಹೊಸನಗರ ತಾಲ್ಲೂಕು ಕಟ್ಟೆಕೊಪ್ಪ ಗ್ರಾಮ ಸರ್ವೆ ನಂ. 98, 72, 115 ರಲ್ಲಿ ಕಂದಾಯ ಅರಣ್ಯ ಪ್ರದೇಶವಿದ್ದು, 2018-19 ರಲ್ಲಿ ಇವುಗಳನ್ನು ಡೀಮ್ಡ್ ಅರಣ್ಯ ಪಟ್ಟಿಗೆ ಸೆರ್ಪಡೆ ಮಾಡಲಾಗಿದೆ. ಈ ಗ್ರಾಮ ಅರಣ್ಯ ಪ್ರದೇಶ ನಿತ್ಯ ಹರಿದ್ವರ್ಣದ ಅರಣ್ಯವಾಗಿ ವರಾಹಿ ಆಣೆಕಟ್ಟು ಮತ್ತು ಮಾಣಿ ಅಣೆಕಟ್ಟು ಹಿನ್ನೀರು ಪ್ರದೇಶಕ್ಕೆ ತಾಗಿಕೊಂಡಿದೆ ಎಂದಿದ್ದಾರೆ.

ಆಗುಂಬೆ ಪ್ರದೇಶದ ಕಟ್ಟೆ ಕೊಪ್ಪ ಅರಣ್ಯಗಳ ರಕ್ಷ ಣೆಗೆ ರಾಜ್ಯ ಅರಣ್ಯ ಇಲಾಖೆ, ಕಂದಾಯ ಇಲಾಖೆ ಧಾವಿಸಬೇಕು.
-ಅನಂತ ಹೆಗಡೆ ಅಶೀಸರ,
ಜೀವ ವೈವಿಧ್ಯ ನಮಂಡಳಿ ನಿಕಟ ಪೂರ್ವ ಅಧ್ಯಕ್ಷ

ಶರಾವತಿ ಅಭಯಾರಣ್ಯ, ಸೋಮೇಶ್ವರ ಅಭಿಯಾರಣ್ಯ, ಅಂಬಾರ ಗುಡ್ಡ ಜೀವ ವೈವಿಧ್ಯ ತಾಣ, ಕೊಡಚಾದ್ರಿ, ಆಗುಂಬೆ ಈ ಎಲ್ಲ ಸೂಕ್ಷ್ಮ ಅರಣ್ಯ ಪ್ರದೇಶಗಳ ಮಧ್ಯೆ ಇರುವ ಪಶ್ಚಿಮ ಘಟ್ಟದ ಹೃದಯಭಾಗದಲ್ಲಿರುವ ಕಟ್ಟೆಕೊಪ್ಪ ಗ್ರಾಮದ 600 ಎಕರೆ ಅರಣ್ಯ ಖಾಸಗಿಯವರ ಕೈಯಲ್ಲಿ ಸಿಲುಕಿದೆ. ಈಗಾಗಲೇ ಅಲ್ಲಿ 60 ಎಕರೆ ಪ್ರದೇಶ ಧ್ವಂಸವಾಗಿದೆ. ಇದೇ ಪ್ರದೇಶದಲ್ಲಿ ಮಿರಿಸ್ವಿಕಾ ಸ್ಟಾಂಪ್’ಗಳಿವೆ. ಮರ ಅರಿಶಿಣದಂಥ ಔಷಧಿ ವೃಕ್ಷಗಳ ಆಗರವೂ ಆಗಿದೆ. ಯಡೂರು ಪ್ರದೇಶ ಭೂ ಕಂಪ, ಭೂ ಕುಸಿತ ಸೂಕ್ಷ್ಮ ವಲಯದಲ್ಲಿ ಬರುತ್ತದೆ ಮಾಹಿತಿ ನೀಡಿದ್ದಾರೆ.

ಅರಣ್ಯದಲ್ಲಿ ಕಾಮಗಾರಿ-ಭೂದಾಖಲೆ ತಿದ್ದುಪಡಿ
2 ವರ್ಷ ಹಿಂದೆಯೆ ಮನವಿ ಮಾಡಿದ್ದರೂ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿರುವ ಅವರು, ಈಗ ಇಲ್ಲಿ ಕಟ್ಟಡಗಳ ನಿರ್ಮಾಣವಾಗಿದೆ. ಅರಣ್ಯ ಭೂಮಿಗೆ ಖಾಸಗಿಯವರು ತಂತಿ ಬೇಲಿ, ಗೇಟುಗಳನ್ನು ಅಳವಡಿಸಿದ್ದಾರೆ ಎಂದಿದ್ದಾರೆ.
Kalahamsa Infotech private limitedಅಕ್ರಮವಾಗಿ ಭೂ ದಾಖಲೆ ತಿದ್ದುಪಡಿಗೆ ಪ್ರಯತ್ನ ನಡೆಯುತ್ತಿವೆ ಎಂದು ಸ್ಥಳೀಯ ರೈತರು ಹೇಳುತ್ತಾರೆ. ಎಕ್ಕದ್ದೆ, ಕೈನಲ್ಲಿ ದಿಂಡ, ದೊಡ್ಡಿನಮನೆ, ಕರುಣಾಪುರ ಗ್ರಾಮಗಳ ರೈತರು 2020-21 ರಲ್ಲಿ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದರು. ಜಿಲ್ಲಾಡಳಿತದ ಗಮನ ಸೆಳೆಯಲಾಗಿತ್ತು. ಆ ಹಂತದಲ್ಲೇ ಕ್ರಮ ಕೈಗೊಂಡಿದ್ದರೆ ನೂರಾರು ಎಕರೆ ಅರಣ್ಯ ನಾಶವಾಗುವುದು ನಿಲ್ಲುತ್ತಿತ್ತು ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ.

ಇಂತಹ ಅರಣ್ಯ ಪ್ರದೇಶ ಕಬಳಿಕೆಯ 15 ಪ್ರಕರಣಗಳು ಶಿವಮೊಗ್ಗ ಜಿಲ್ಲೆಯಲ್ಲಿದೆ.
-ಪ್ರೊ.ಬಿ.ಎಂ. ಕುಮಾರಸ್ವಾಮಿ, ಪರಿಸರ ತಜ್ಞ

ವಿಪುಲ ಸಸ್ಯಾಗರ
ನೇರಳೆ, ಧೂಪ, ತೇಗ, ಹೊನ್ನೆ, ಹಲಸು, ಬೆಲ್ಲವಾರ, ಗುಳಮಾವು, ಬಚ್ಚಣ್ಯಾಣೆ, ಭೋಗೆ, ಹೈಗ, ಹುಲುಚಪ್ಪ, ಹೆಬ್ಬಲಸು, ಹರಳು, ಗುರಿಗೆ, ತಾರೆ, ಸುರಹೊನ್ನೆ, ನೆಟ್ಟುಗಾರ, ಬೈನೆ, ಸಂಪಿಗೆ, ಗಣಪೆ, ಬೂರಿ, ಘನತ್ಯೆ, ದೇವದಾರು, ಕೆಂದಲ, ನಂದಿ, ರಾಮಪತ್ರೆ, ಮಂಗಪ್ಪ, ಇಪ್ಪ ಇತ್ಯಾದಿ ಕೇಂದ್ರ ರಾಜ್ಯ ಸರ್ಕಾರ ಪ್ರಕಟಿಸಿದ ವಿನಾಶದ ಅಂಚಿನ ವೃಕ್ಷ ಪ್ರಬೇಧಗಳು ಇಲ್ಲಿವೆ.

ಮೂಲತಃ ಇದು 1940-50 ರಲ್ಲಿ ಸರ್ಕಾರಿ ಕಾನು ಅರಣ್ಯ ಆಗಿತ್ತು. ಆನಂತರ ಖಾಸಗಿಯವರು ಭೂ ದಾಖಲೆ ತಿದ್ದುಪಡಿ ಮಾಡಿಸಿಕೊಂಡಿರಬಹುದು ಎಂದು ಸ್ಥಳೀಯರು ಹೇಳುತ್ತಾರೆ.

ಈಗ ಭೂದಾಖಲೆ ಆರ್’ಆರ್ 56ನಲ್ಲಿ ಇಬ್ಬರು ಖಾಸಗಿಯವರಿಗೆ ತಲಾ 300 ಎಕರೆ ಭೂಮಿ ಹೇಗೆ ಸರ್ಕಾರ ನೀಡಲು ಸಾಧ್ಯ. ಈ ಬಗ್ಗೆ ಯಾವ ಉಲ್ಲೇಖ ಇಲ್ಲ ಎಂದು ಭೂ ದಾಖಲೆ ತಜ್ಞರು ಅಭಿಪ್ರಾಯ ನೀಡುತ್ತಾರೆ.

ಇಂತಹ ಸೂಕ್ಷ್ಮ ಅರಣ್ಯಗಳಿಗೆ ರಕ್ಷ ಣೆ ನೀಡಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
-ಕೆ. ವೆಂಕಟೇಶ ಸಾಗರ, ಜೀವ ವೈವಿಧ್ಯ ಮಂಡಳಿ ಸದಸ್ಯ

ಆಗ್ರಹವೇನು?
ಕಂದಾಯ ಕಾಯಿದೆ, ಅರಣ್ಯ ಕಾಯಿದೆ, ಜೀವ ವೈವಿಧ್ಯ ಕಾಯಿದೆ ಜಾರಿ ಮಾಡಿ ಸೂಕ್ಷ್ಮ ಅರಣ್ಯಗಳ ರಕ್ಷ ಣೆ ಮಾಡಬೇಕು ಎಂದು ವೃಕ್ಷ ಲಕ್ಷ ಆಂದೋಲನ ಸಂಘಟನೆ ಆಗ್ರಹಿಸಿದೆ.

ಜಿಲ್ಲಾಡಳಿತ, ಜಿಲ್ಲಾ ಅರಣ್ಯ ಇಲಾಖೆ ತುರ್ತಾಗಿ ಸ್ಥಳ ಪರಿಶೀಲನೆ ಮಾಡಿ 600 ಎಕರೆ ಡೀಮ್ಡ್ ಅರಣ್ಯ, 25 ಲಕ್ಷ ಗಿಡಮರಗಳು ವೃಕ್ಷಗಳ ನಾಶವಾಗದಂತೆ ರಕ್ಷ ಣೆ ನೀಡಬೇಕು. ಖಾಸಗಿಯವರು ಕಂದಾಯ ಕಾಗದ ಪತ್ರ ತಿದ್ದುಪಡಿ ಅಕ್ರಮ ಮಾಡದಂತೆ ತಡೆ ಹಾಕಬೇಕು. ಯಾವುದೇ ಮರ ಗಿಡ ಕಟಾವಿಗೆ ಹಾಗೂ ಕಾಮಗಾರಿಗೆ ಅವಕಾಶ ನೀಡಬಾರದು ಎಂದು ಗ್ರಾಮಗಳ ಜನ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಸಾಗರ ಎಸಿ ಅವರಿಗೆ ಮನವಿ ಮಾಡಿದ್ದಾರೆ.

(ವರದಿ: ಮಧುರಾಮ್)

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: AgumbeBiodiversity CouncilForest DepartmentGreen foresthosanagarKannada News WebsiteKodachadriLand recordLatest News KannadaLocal NewsMalnad NewsShimogaShivamoggaShivamogga NewsSomeshwar Forestಅರಣ್ಯ ಇಲಾಖೆಆಗುಂಬೆಕೊಡಚಾದ್ರಿಜೀವ ವೈವಿಧ್ಯ ಮಂಡಳಿಭೂ ದಾಖಲೆಸೋಮೇಶ್ವರ ಅಭಿಯಾರಣ್ಯಹರಿದ್ವರ್ಣ ಅರಣ್ಯಹೊಸನಗರ
Share198Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಉತ್ತರ ಪ್ರದೇಶದಲ್ಲಿ ಐತಿಹಾಸಿಕ ದಾಖಲೆ ಬರೆದ ಸಿಎಂ ಯೋಗಿ ಆದಿತ್ಯನಾಥ್

Next Post

ಜೀವವೈವಿಧ್ಯ ಯೋಜನೆಗಳ ಯಶೋಗಾಥೆ ಬಿಂಬಿಸುವ ಪತ್ರಿಕೆ ಬಿಡುಗಡೆ

kalpa News

kalpa News

Next Post
ಜೀವವೈವಿಧ್ಯ ಯೋಜನೆಗಳ ಯಶೋಗಾಥೆ ಬಿಂಬಿಸುವ ಪತ್ರಿಕೆ ಬಿಡುಗಡೆ

ಜೀವವೈವಿಧ್ಯ ಯೋಜನೆಗಳ ಯಶೋಗಾಥೆ ಬಿಂಬಿಸುವ ಪತ್ರಿಕೆ ಬಿಡುಗಡೆ

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL