ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಾಳೆಯಿಂದ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಯಲ್ಲಿ ಇರಲಿದ್ದು, ನಾಳೆಯಿಂದ ನಡೆಯುವ ಲಾಕ್ ಡೌನ್ ವೇಳೆಯಲ್ಲಿ ಸೀಜ್ ಆಗುವ ವಾಹನಗಳು 14 ದಿನ ಮುಗಿಯವರೆಗೂ ಮಾಲೀಕರಿಗೆ ಸಿಗುವುದಿಲ್ಲ ಎಂದು ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 76 ಚೆಕ್ ಪೋಸ್ಟ್ ಗುರುತಿಸಲಾಗಿದೆ. ನಗರದಲ್ಲಿ 31 ಚೆಕ್ ಪೋಸ್ಟ್’ಗಳಿವೆ. ನಾಳೆಯಿಂದ ನಡೆಯುವ ಲಾಕ್ ಡೌನ್ ವೇಳೆಯಲ್ಲಿ ಸೀಜ್ ಆಗುವ ವಾಹನಗಳು 14 ದಿನ ಮುಗಿಯವರೆಗೂ ಮಾಲೀಕರಿಗೆ ಸಿಗುವುದಿಲ್ಲ ಎಂದರು.
ಈಗಾಗಲೇ ಮಾಸ್ಕ್ ಜಾಗೃತಿ ಮೂಡಿಸಲಾಗುತ್ತಿದೆ. 142 ಕಮರ್ಷಿಯಲ್ ಅಂಗಡಿಗಳನ್ನು ಸೀಜ್ ಮಾಡಿ, ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗಿದೆ. ನಾಳೆಯಿಂದ ನಡೆದುಕೊಂಡು ಇತರೆ ಬಡಾವಣೆಗೂ ಹೋಗಲೂ ಸಹ ಅವಕಾಶವಿಲ್ಲ. ತರಕಾರಿ ಹಾಲು ಖರೀದಿಗೆ ಅವಕಾಶ ಮಾಡಲಾಗಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















