ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಹೊನ್ನಾಳ್ಳಿ ರಸ್ತೆಯ ಫೈ ಓರ್ವ ಸಮೀಪದ ನೆಕ್ಸಾಶೋ ರೂಂ ಬಳಿ, ಇಂದು ಸಂಜೆ ಶಾಲಾ ಬಸ್ ವೊಂದು ಕಾರಿಗೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ‘ನ್ಯೂಸ್ ವಾರಿಯರ್ಸ್ ಪತ್ರಿಕೆ ಸಂಪಾದಕ ರಘುರಾಜ್ ಅವರು ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ.
ಪತ್ರಿಕಾ ಕಚೇರಿಯಿಂದ ಕಾರು ಚಲಾಯಿಸಿಕೊಂಡು ಆಗಮಿಸುತ್ತಿದ್ದ ವೇಳೆ, ಖಾಸಗಿ ಶಿಕ್ಷಣ ಸಂಸ್ಥೆಯ ಶಾಲಾ ಡಿಕ್ಕಿ ಹೊಡೆದಿದೆ.
ರಘುರಾಜ್ ಅವರ ಕೈ, ಎದೆ, ತಲೆ ಭಾಗಕ್ಕೆ ಗಾಯವಾಗಿದೆ. ತಕ್ಷಣವೇ ಸಾರ್ವಜನಿಕರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















