ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶುಕ್ರವಾರ ಬೆಳಗ್ಗೆ ಶಿವಮೊಗ್ಗ ನಗರದ, ಬಿಎಚ್ ರಸ್ತೆಯ ಭಾರ್ಗವಿ ಪೆಟ್ರೋಲ್ ಎದುರು ಎಪಿಎಂಸಿ ಮಾರ್ಕೆಟ್, ಪಕ್ಕದ ಬಹು ಮಹಡಿ ಕಾಂಪ್ಲೆಕ್ಸ್’ನಲ್ಲಿ, ಅಗ್ನಿಶಾಮಕ ದಳ ಮತ್ತು ಗೃಹರಕ್ಷಕ ದಳ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ವಿಪತ್ತು ಸಂದರ್ಭದಲ್ಲಿ ಸಾರ್ವಜನಿಕರ ರಕ್ಷಣೆಯ ಅಣಕು ಪ್ರದರ್ಶನ ಮಾಡಿ ತೋರಿಸಿದರು.
ಪ್ರಕೃತಿ ವಿಕೋಪ ಆಥವಾ ಮಾನವ ನಿರ್ಮಿತ ಅವಘಡಗಳಿಂದ ಉಂಟಾಗುವ ಆಪಘಾತಗಳಲ್ಲಿ, ಈ ಇಲಾಖೆಗಳು ಮಾಡುವ ಕಾರ್ಯಗಳು ಹಾಗೂ ಈ ಸಂದರ್ಭಗಳಲ್ಲಿ ಸಾರ್ವಜನಿಕರು ಯಾವ ರೀತಿ ನಡೆದುಕೊಳ್ಳಬೇಕು ಎಂದು ಅಗ್ನಿ ಶಾಮಕದಳದ ಅಧಿಕಾರಿ ತಿಳಿಸಿದರು.
ಎಲ್ಲಾದರೂ ಬಹು ಮಹಡಿಗಳಲ್ಲಿ ಗ್ಯಾಸ್, ಕರೆಂಟ್ ಸಾರ್ಟ್ ಸರ್ಕ್ಯೂಟ್ ಗಳಿಂದ ಬೆಂಕಿ ಅವಗಡ ಸಂಭವಿಸಿದಾಗ ಅ ಸಂದರ್ಭದಲ್ಲಿ ಸಾರ್ವಜನಿಕರಿಂದ ಕಂಟ್ರೊಲ್ ರೂಂಗೆ ಕರೆ ಬರುವದು ಹಾಗೂ ಅಗ್ನಿಶಾಮಕದಳದ ವಾಹನ ಸೈರನ್ ಸದ್ದಿನೊಂದಿಗೆ ಬರುವುದು, ದಾರಿಯಲ್ಲಿ ಎಷ್ಟೆ ಟ್ರಾಫಿಕ್ ಜಾಮ್ ಅದರೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ನಮಗೆ ದಾರಿ ಮಾಡಿ ಕೊಡುವರು ನಾವು ಸ್ಥಳಕ್ಕೆ ಬಂದು ರೆಸ್ಕ್ಯೂ ಮಾಡುತ್ತೇವೆ. ಕೆಲವೊಂದು ಸಂದರ್ಭಗಳಲ್ಲಿ ತರಬೇತಿಗಳ ಪಡೆದ ನಿಸ್ವಾರ್ಥ ಯೋಧರು ಗೃಹರಕ್ಷಕದಳ ಸಿಬ್ಬಂದಿಗಳ ಸಹಾಯ ಪಡೆಯಲಾಗುತ್ತದೆ. ಅವರು ಗಾಯಳುಗಳಿಗೆ ರೆಸ್ಕ್ಯೂ ಮಾಡಿ ಪ್ರಥಮ ಚಿಕಿತ್ಸೆಯ ಮೂಲಕ ಬ್ಯಾಂಡೇಜ್ ಮಾಡಿ, ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸುವರು ಎಂಬುದನ್ನು ತಿಳಿಸಿದರು.
ಈ ಅಣಕು ಪ್ರದರ್ಶನದಲ್ಲಿ ಅಗ್ನಿ ಶಾಮಕದಳದ ಅಧಿಕಾರಿಗಳು, ಗೃಹರಕ್ಷಕದಳದ ಅಧಿಕಾರಿಗಳು, ಪೊಲೀಸ್ ಇಲಾಖೆಯ ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post