ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಅಡಿಯಲ್ಲಿ ನಗರದಲ್ಲಿ ಕೋಟ್ಯಂತರ ರೂ. ಮೊತ್ತದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಹಲವು ಕಾಮಗಾರಿಗಳ ಉದ್ಘಾಟನೆ ಡಿ.28ರಂದು ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಡಿ.28ರಂದು ಸಂಜೆ 4.30ಕ್ಕೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಹಲವು ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ ಎಂದರು.
ಕೋವಿಡ್ ಹಿನ್ನೆಲೆ, ಅತಿವೃಷ್ಠಿ, ಸ್ಥಳಗಳ ಅತಿಕ್ರಮ ತೆರವಿನ ಪ್ರಕರಣಗಳು ಸೇರಿದಂತೆ ಅಭಿವೃದ್ಧಿಕಾಮಗಾರಿಗಳಿಗೆ ಕೆಲವು ಅಡೆತಡೆಗಳಾದರೂ ಪ್ರಸ್ತುತ ಕಾಮಗಾರಿಗಳ ಅನುಷ್ಠಾನ ವೇಗ ಪಡೆದುಕೊಂಡಿದೆ. ಪ್ರಸ್ತುತ ಹಲವು ಸ್ಮಾರ್ಟ್ ಸಿಟಿ ಯೋಜನೆಗಳು ಹಾಗೂ ಮಹಾನಗರ ಪಾಲಿಕೆಯ ವತಿಯಿಂದ ಕಾಮಗಾರಿಗಳ ಉದ್ಘಾಟನೆ ಮಾಡಿ ಸಾರ್ವಜನಿಕರ ಬಳಕೆಗೆ ಲಭ್ಯಗೊಳಿಸುವುದರ ಜೊತೆಗೆ ಹಲವು ಯೋಜನೆಗಳ ಟೆಂಡರ್ ಪ್ರಕ್ರಿಯೆ ಮುಗಿದು ಶಂಕು ಸ್ಥಾಪನೆ ಮಾಡಿ ಅತಿ ಶೀಘ್ರವಾಗಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದರು.
ಯಾವೆಲ್ಲಾ ಕಾಮಗಾರಿಗೆ ಶಂಕುಸ್ಥಾಪನೆ?
- ಯೋಗ ಭವನ – 3.92 ಕೋಟಿ ರೂ.
- ಇಂಟಿಗ್ರೇಟೆಡ್ ಸೆಂಟರ್ ಫಾರ್ ಕಮಾಂಡ್ ಅಂಡ್ ಕಂಟ್ರೋಲ್ ಕಟ್ಟಡ ನಿರ್ಮಾಣ – 2.05 ಕೋಟಿ ರೂ.
- ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣ ಸುಂದರೀಕರಣ – 5.47 ಕೋಟಿ ರೂ.
- ಸಿಮ್ಸ್ ಭೋದನಾ ಕಾಲೇಜಿನ 1ನೆಯ ಅಂತಸ್ಥಿನ ಬಾಕಿ ಉಳಿದಿರುವ ಕಾಮಗಾರಿ – 4.50 ಕೋಟಿ ರೂ.
- ಹೊಳೆ ಬಸ್ ನಿಲ್ದಾಣ ಅಭಿವೃದ್ಧಿ ಕಾಮಗಾರಿ – 0.72 ಕೋಟಿ ರೂ.
- ಹಸಿರು ನಗರೀಕರಣ – 2.82 ಕೋಟಿ ರೂ.
- ಮಹಾತ್ಮ ಗಾಂಧಿ ನಗರ ವಿಕಾಸ್ ಯೋಜನೆ ಅಡಿಯಲ್ಲಿನ 137 ಕಾಮಗಾರಿಗಳ ಶಂಕುಸ್ಥಾಪನೆ – 105 ಕೋಟಿ ರೂ.
ಯಾವೆಲ್ಲಾ ಕಾಮಗಾರಿ ಉದ್ಘಾಟನೆ?
- ನಗರ ವ್ಯಾಪ್ತಿಯಲ್ಲಿ 45 ಸರ್ಕಾರಿ ಶಾಲೆಗಳ ಸ್ಮಾರ್ಟ್ ಎಜುಕೇಶನ್ ಕಾಮಗಾರಿ – 8.50 ಕೋಟಿ ರೂ.
- ಮಾಸ್ತಾಂಬಿಕಾ ಪಾರ್ಕ್ – 1.06 ಕೋಟಿ ರೂ.
- ಪ್ಯಾಕೇಜ್ ನಂ.2 ಕನ್ಸರ್ವೆನ್ಸಿ ಅಭಿವೃದ್ಧಿ – 1.55 ಕೋಟಿ ರೂ.
- ಸಿಮ್ಸ್ ಉಪಕರಣ ಒದಗಿಸುವುದು – 0.50 ಕೋಟಿ ರೂ.
- ಜಿಲ್ಲಾ ಆರೋಗ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಉಪಕರಣ ಒದಗಿಸುವುದು – 1 ಕೋಟಿ ರೂ.
- ಪಾಲಿಕೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಕಸ ಸಂಗ್ರಹಣೆಗಾಗಿ ಖರೀದಿಸಲಾಗಿರುವ 51 ಆಟೋ ಟೈಪರ್ಸ್ – 3.73 ಕೋಟಿ ರೂ.
- ಪಾಲಿಕೆ ವ್ಯಾಪ್ತಿಯ 70 ಸರ್ಕಾರಿ ಶಾಲೆಗಳ ದುರಸ್ಥಿ – 11 ಕೋಟಿ ರೂ.
- ಪಾಲಿಕೆ ವ್ಯಾಪ್ತಿಯ 20 ಶೌಚಾಲಯ ಕಾಮಗಾರಿ – 4.68 ಕೋಟಿ ರೂ.
- ಪಾಲಿಕೆ ವ್ಯಾಪ್ತಿಯಲ್ಲಿ ಪಾರದರ್ಶಕ ಆಡಳಿತಾತಕ್ಕಾಗಿ ಅಭಿವೃದ್ಧಿಪಡಿಸಲಾಗಿರುವ ಉದ್ದಿಮೆ ಪರವಾನಗಿ ಮತ್ತು ಬಿಬಿಪಿಎಸ್ ತಂತ್ರಾಂಶದ ಉದ್ಘಾಟನೆ – 0.12 ಕೋಟಿ ರೂ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post