ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದಿತೀಡಿ ಸರಿದಾರಿಗೆ ನಡೆಸುವಲ್ಲಿ ಚಲನಚಿತ್ರಗಳ ಪಾತ್ರ ಮಹತ್ವದ್ದಾಗಿದೆ ಎಂದು ಖ್ಯಾತ ಆಪ್ತ ಸಮಾಲೋಚಕ ನಡಹಳ್ಳಿ ವಸಂತ್ ಅಭಿಪ್ರಾಯಪಟ್ಟರು.
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಚಲನಚಿತ್ರ ವಿಮರ್ಶೆ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಸುಬ್ಬಯ್ಯ ಲಿಟರರಿ ಕ್ಲಬ್ ಹಾಗೂ ಮನೋವೈದ್ಯ ಶಾಸ್ತ್ರ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಚಲನಚಿತ್ರ ವಿಮರ್ಶೆ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಚಲನಚಿತ್ರ ಎನ್ನುವುದು ಸಮಾಜದ ಪ್ರತಿಯೊಬ್ಬರ ಮೇಲೂ ಪ್ರಭಾವ ಬೀರುವಂತಹ ಪರಿಣಾಮಕಾರಿ ಮಾಧ್ಯಮವಾಗಿದೆ. ವಾಣಿಜ್ಯ ಉದ್ದೇಶದ ಚಿತ್ರಗಳು ಒಂದೆಡೆಯಾದರೆ, ಸಮಾಜದಲ್ಲಿರುವ ತಪ್ಪುಗಳನ್ನು ತಿದ್ದಿ ಉತ್ತಮ ಸಂದೇಶ ಸಾರುವಂತಹ ಚಲನಚಿತ್ರಗಳು ಹೆಚ್ಚು ಹೆಚ್ಚು ಬರಬೇಕಿದೆ ಎಂದರು.
ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಒತ್ತಡಗಳು ಇದ್ದೇ ಇರುತ್ತದೆ. ಪ್ರತಿ ಕುಟುಂಬದಲ್ಲಿ ಒಬ್ಬರಲ್ಲ ಒಬ್ಬರು ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವವರು ಇದ್ದೇ ಇರುತ್ತಾರೆ. ಇದು ಇಂದಿನ ಯುಗದಲ್ಲಿ ಸಾಮಾನ್ಯ ಸಂಗತಿಯಾಗಿದೆ. ಆದರೆ, ಇದನ್ನು ಹೇಳಿಕೊಳ್ಳಲು ಸಹ ಕೀಳರಿಮೆ ಇರುತ್ತದೆ. ಇರುವ ವಿಷಯವನ್ನು ಒಪ್ಪಿಕೊಂಡು ಅದನ್ನು ಸರಿಪಡಿಸಿಕೊಂಡು ಬದುಕಲೇಬೇಕು. ಇದಕ್ಕಾಗಿ ಕೀಳರಿಮೆಯನ್ನು ತೊಡೆದು ಹಾಕಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು ಎಂದರು.
ಇನ್ನು ಹಲವು ಚಲನಚಿತ್ರಗಳಲ್ಲಿ ವೈದ್ಯ ಸಮೂಹವನ್ನು ತಪ್ಪಾಗಿ ತೋರಿಸುವ ಕಾರ್ಯಗಳು ನಡೆಯುತ್ತಿದೆ. ಇಂತಹ ಪ್ರವೃತ್ತಿಯನ್ನು ಚಿತ್ರ ನಿರ್ಮಿಸುವವರು ತೆಗೆದು ಹಾಕಿ ಸಮಾಜದಲ್ಲಿ ವೈದ್ಯರ ಪಾತ್ರ ಹಾಗೂ ಅವರ ತ್ಯಾಗಗಳು ಎಂತಹುದು ಎಂಬುದನ್ನು ತೋರಿಸುವ ಕೆಲಸಗಳಾಗಬೇಕು ಎಂದರು.
ಶಿಕಾರಿಪುರ ಸರ್ಕಾರಿ ಆಸ್ಪತ್ರೆಯ ಮನೋವೈದ್ಯ ಡಾ. ಹೆಚ್.ಸಿ. ಸಂಜಯ್ ಮಾತನಾಡಿ, ಭಾವನಾತ್ಮಕ ಏರಿಳಿತಗಳು ದೇಹದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯಕ್ಕೂ ಒತ್ತು ನೀಡಬೇಕು ಎಂದರು.
ಸಿನಿಮಾ ಎನ್ನುವುದು ಸಮಾಜ ಹಾಗೂ ಸಂಬಂಧಗಳನ್ನು ಸುಧಾರಿಸುವ ದೃಷ್ಟಿಯಲ್ಲಿ ಬೇರೆಯದೇ ಆಯಾಮವನ್ನು ಪಡೆದುಕೊಳ್ಳುತ್ತವೆ. ಹೀಗಾಗಿ ಚಲನಚಿತ್ರವನ್ನು ರೂಪಿಸುವಾಗ ಅತ್ಯಂತ ಜಾಗ್ರತೆ ವಹಿಸಬೇಕು ಎಂದರು.
ಜೀವನದಲ್ಲಿ ಸಮಸ್ಯೆಗಳು ಬಂದಾಗ ವಿವಿಧ ಪರಿಹಾರ ಮಾರ್ಗಗಳನ್ನು ಕಂಡುಕೊಂಡು ಬೆಳವಣಿಗೆಯತ್ತ ಸಾಗಬೇಕು. ಇದೇ ವೇಳೆ ಸೃಜನಾತ್ಮಕ ಆಲೋಚನೆಗಳನ್ನು ಉಳಿಸಿಕೊಳ್ಳಬೇಕು. ಇಂದಿನ ಕಾಲಘಟ್ಟದಲ್ಲಿ ಪ್ರತಿಯೊಂದಕ್ಕೂ ಸೋಷಿಯಲ್ ಮೀಡಿಯಾ ಹಾಗೂ ಆನ್‌ಲೈನ್ ಮೊರೆಹೋಗುವ ಪ್ರವೃತ್ತಿ ಹೆಚ್ಚುತ್ತಿದ್ದು, ಇದರ ಬದಲಾವಣೆಯಾಗಬೇಕು ಎಂದರು.
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಡಾ. ವಿನಯಾ ಶ್ರೀನಿವಾಸ್ ಸ್ವಾಗತ ಭಾಷಣ ಮಾಡಿ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಚಲನಚಿತ್ರ ಮಾಡುವುದು ಎಷ್ಟು ಮಹತ್ವದ್ದು ಎಂದು ತಿಳಿಸಿದರು.
ಮನೋರೋಗ ತಜ್ಞೆ ಡಾ. ಕೆ.ಎಸ್. ಶುಭ್ರತಾ ನಿರೂಪಿಸಿ, ಕಾಲೇಜಿನ ಯು.ಜೆ. ನಿರಂಜನಮೂರ್ತಿ ವಂದನಾರ್ಪಣೆ ಮಾಡಿದರು.
ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹರೀಶ್ ದೆಲಂತಬೆಟ್ಟು, ಕಾಲೇಜಿನ್ ಡೀನ್ ಡಾ. ಎಸ್.ಎಮ್. ಕಟ್ಟಿ, ಉಪಪ್ರಾಂಶುಪಾಲ ಡಾ. ಬಿ.ಎಮ್. ಸಿದ್ದಲಿಂಗಪ್ಪ, ಶೈಕ್ಷಣಿಕ ನಿರ್ದೇಶಕ ಡಾ. ಆರ್.ಕೆ. ಪೈ, ಡಾ. ನಂದಕಿಶೋರ್ ಲಾವಟೆ, ಡಾ. ಚೇತನ್, ಡಾ. ಸುಜಿತ್, ಡಾ. ಸಾಯಿಕೋಮಲ್ ಸೇರಿದಂತೆ ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ವಿಜೇತರಾಗಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post