ಕಲ್ಪ ಮೀಡಿಯಾ ಹೌಸ್ | ಸೊರಬ |
ಎರಡು ವರ್ಷದ ಪುಟ್ಟ ಬಾಲಕ ರಿಯಾಂಶ್ ಶ್ರುತ್ಯರ್ಥ ಪಿ ಜಿ ತನ್ನ ಅದ್ಭುತ ಸ್ಮರಣ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಆಯ್ಕೆಯಾಗಿದ್ದಾನೆ.
ಸೊರಬ ಮೂಲದ ಶ್ರುತ್ಯರ್ಥ ಪಿ.ಜಿ. ಗೀತಾ ಕೆ ಮತ್ತು ಪಿ.ಎಚ್. ಜ್ಞಾನೇಶ್ವರ್ ದಂಪತಿಗಳ ಎರಡನೆಯ ಪುತ್ರ.
ಈ ಪ್ರತಿಭಾವಂತ ಬಾಲಕ ಇಂಗ್ಲೀಷ್ ಪದ್ಯಗಳನ್ನು ನಿರರ್ಗಳವಾಗಿ ಹೇಳುವ ಮೂಲಕ ತನ್ನ ಸ್ಮರಣಾ ಪ್ರತಿಭೆಯಿಂದ ಗಮನ ಸೆಳೆದಿದ್ದಾನೆ. ದೇಶದ 14 ಮಹಾನ್ ವ್ಯಕ್ತಿಗಳು, 33 ಪ್ರಾಣಿಗಳು, 2 ಪಕ್ಷಿಗಳು, 8 ಸಮುದ್ರ ಜೀವಿಗಳು, 5 ಕೀಟಗಳು, 4 ಹೂವುಗಳು, 10 ತರಕಾರಿಗಳು, 14 ಹಣ್ಣುಗಳು, 16 ವಾಹನಗಳು, 11 ಬಣ್ಣಗಳು, 33 ವಿವಿಧ ವಸ್ತುಗಳು, 3 ಮರಗಳು, 10 ರಾಷ್ಟ್ರೀಯ ಚಿಹ್ನೆಗಳು, ತಿಂಗಳುಗಳ, ವಾರಗಳ ಹೆಸರುಗಳನ್ನು ಇಂಗ್ಲೀಷ್ ಮತ್ತು ಕನ್ನಡದಲ್ಲಿ, ಕನ್ನಡ ಮತ್ತು ಇಂಗ್ಲೀಷ್ 1 ರಿಂದ 15 ವರೆಗಿನ ಸಂಖ್ಯೆಗಳನ್ನು, ಎ ಇಂದ ಜಡ್ ವರೆಗೆ ಇಂಗ್ಲೀಷ್ ವರ್ಣಮಾಲೆ, 2 ಸಂಸ್ಕೃತ ಶ್ಲೋಕ, ದೇಹದ ವಿವಿಧ ಅಂಗಾಂಗಗಳ ಗುರುತಿಸುವಿಕೆ ಮುಂತಾದವುಗಳ ಸ್ಮರಣಾ ಶಕ್ತಿ ವಿಶೇಷವೆನಿಸಿದ್ದು ಹಲವರ ಪ್ರಶಂಸನೆಗೆ ಪಾತ್ರವಾಗಿದ್ದಾನೆ.
(ವರದಿ: ಮಧುರಾಮ್, ಸೊರಬ)

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















