ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೈಲ್ವೆ ಹಳಿ ಮೇಲೆ ಓಡಾಡುತ್ತಿದ್ದ ಎಮ್ಮೆಗಳ ಪ್ರಾಣ ಉಳಿಸಲು, ರೈಲನ್ನೇ ನಿಲ್ಲಿಸಿ ಲೋಕೋ ಪೈಲೈಟ್ (ರೈಲ್ವೆ ಚಾಲಕ) ಮಾನವೀಯತೆ ಮೆರೆದ ಅಪರೂಪದ ಘಟನೆ ನಗರದ ಕಾಶೀಪುರ ರೈಲ್ವೆ ಗೇಟ್ ಸಮೀಪ ಮಂಗಳವಾರ ಮಧ್ಯಾಹ್ನ ನಡೆಯಿತು.
Also Read: ಕಾರು ಅಪಘಾತ: ಪ್ರಾಣಾಪಾಯದಿಂದ ಪಾರಾದ ಮಾಜಿ ಸಚಿವ ಟಿ.ಬಿ. ಜಯಚಂದ್ರ
ಮಧ್ಯಾಹ್ನ 1.10 ರ ಸುಮಾರಿಗೆ ತಾಳಗುಪ್ಪದಿಂದ ಶಿವಮೊಗ್ಗಕ್ಕೆ ಪ್ಯಾಸೆಂಜರ್ ರೈಲು ಆಗಮಿಸುತ್ತಿತ್ತು. ಈ ವೇಳೆ ಕಾಶೀಪುರ ರೈಲ್ವೆ ಗೇಟ್ ನ ಜನಶಿಕ್ಷಣ ಸಂಸ್ಥೆಯ ಸಮೀಪ, ಎಮ್ಮೆಗಳ ಹಿಂಡೊಂದು ಹಳಿಗಳ ಬಳಿ ಓಡಾಡುತ್ತಿತ್ತು.
ಇದನ್ನು ಗಮನಿಸಿದ ಲೋಕೋ ಪೈಲೈಟ್ ದೂರದಲ್ಲಿಯೇ ರೈಲನ್ನು ನಿಲ್ಲಿಸಿದರು. ಎಮ್ಮೆಗಳು ಹಳಿಯಿಂದ ಬದಿಗೆ ಸರಿದ ನಂತರ, ರೈಲು ಚಾಲನೆಗೊಳಿಸಿದರು.
Also Read: ಪಂಡರಾಪುರದಲ್ಲಿ ರಾಜ್ಯದ ಯತ್ರಾರ್ಥಿಗಳಿಗಾಗಿ ನಿರ್ಮಾಣವಾಗಲಿದೆ ಅತಿಥಿ ಗೃಹ
ಲೊಕೋ ಪೈಲೈಟ್ ನ ಈ ಮಾನವೀಯ ಕಾರ್ಯಕ್ಕೆ ರೈಲ್ವೆ ಗೇಟ್ ಬಳಿ ನಿಂತಿದ್ದ ವಾಹನ ಚಾಲಕರು, ಸ್ಥಳೀಯ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಘಟನೆಯನ್ನು ಪತ್ರಕರ್ತ ಬಿ.ರೇಣುಕೇಶ್ ಅವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
(ಕೃಪೆ: ಬಿ. ರೇಣುಕೇಶ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post