ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಆಗುಂಬೆ: ಭಾರೀ ಮಳೆಯ ಪರಿಣಾಮ ತೀರ್ಥಹಳ್ಳಿ-ಆಗುಂಬೆ ಮಾರ್ಗದ ರಂಜದಕಟ್ಟೆ ಬಳಿಯಲ್ಲಿನ ಸೇತುವೆ ಕುಸಿಯುವ ಸ್ಥಿತಿಗೆ ತಲುಪಿದ್ದು, ಈ ಮಾರ್ಗವನ್ನು ಬಂದ್ ಮಾಡಲಾಗಿದೆ.
ದಶಕಗಳ ಕಾಲದ ಹಳೆಯ ಈ ಸೇತುವೆ ಈಗ ಶಿಥಿಲಾವಸ್ಥೆ ತಲುಪಿದ್ದು, ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿ ಎದುರಾಗಿದೆ. ಹೀಗಾಗಿ, ಈ ಸೇತುವೆಯನ್ನು ಬಂದ್ ಮಾಡಲಾಗಿದ್ದು, ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ತೀರ್ಥಹಳ್ಳಿ-ಆಗುಂಬೆ ಮಾರ್ಗವಾಗಿ ಶಿವಮೊಗ್ಗ ಹಾಗೂ ಉಡುಪಿಗೆ ನೇರ ಸಂಪರ್ಕ ಕಡಿತಗೊಂಡಂತಾಗಿದೆ.
ಬದಲಿ ಮಾರ್ಗ ಬಳಸಿ:
- ಉಡುಪಿ, ಆಗುಂಬೆ, ಸಾಗರ, ಶಿವಮೊಗ್ಗ ತೀರ್ಥಹಳ್ಳಿ ಮಾರ್ಗದಲ್ಲಿ ಕಲ್ಮನೆ, ಉಂಟೂರುಕಟ್ಟೆ ಕೈಮರ ನಂತರ ಸಿಗುವ ಬಿಳುಕೊಪ್ಪ ಇಲ್ಲಿ ಶಾಲಾ ಸಮೀಪವಿರುವ ರಸ್ತೆಯಲ್ಲಿ ಸಾತ್ಗೋಡು ಸಂಚರಿಸಿ ಅಲ್ಲಿಂದ ಬಲಭಾಗದಿಂದ ಮುಕ್ತಿಹರಿಹರಪುರ, ಬೊಬ್ಬಿ ಮಾರ್ಗವಾಗಿ ತೀರ್ಥಹಳ್ಳಿ ಮಾರ್ಗ
- ಆಗುಂಬೆ-ಕೊಪ್ಪ-ಶಿವಮೊಗ್ಗ ಮಾರ್ಗ
- ಆಗುಂಬೆ-ಕಮ್ಮರಡಿ-ದೇವಂಗಿ-ತೀರ್ಥಹಳ್ಳಿ
- ಉಡುಪಿ-ಹುಲಿಕಲ್-ಮಾಸ್ತಿಕಟ್ಟೆ-ಕವಲೇದುರ್ಗ-ತೀರ್ಥಹಳ್ಳಿ
Get In Touch With Us info@kalpa.news Whatsapp: 9481252093
Discussion about this post