ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶಿವಮೊಗ್ಗ ನಗರ ಕೇಂದ್ರ ಗ್ರಂಥಾಲಯವು ನವೆಂಬರ್ 14 ರಿಂದ 20ರವರೆಗೆ ‘‘ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ’’ದ ಅಂಗವಾಗಿ ಶಿವಮೊಗ್ಗ ನಗರ ವ್ಯಾಪ್ತಿಯ ಪ್ರಾಥಮಿಕ, ಪ್ರೌಢ ಮತ್ತು ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಪುಸ್ತಕ ಸಂಸ್ಕೃತಿ ಮನೋಭಾವ ಮೂಡಿಸಲು, ಚಿತ್ರಕಲೆ, ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ.
5 ರಿಂದ 7ನೇ ತರಗತಿಯ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಎಂಬ ವಿಷಯದ ಕುರಿತು ಚಿತ್ರಕಲೆ, 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಆನ್‌ಲೈನ್ ಶಿಕ್ಷಣದ ಅನುಕೂಲ ಹಾಗೂ ಅನಾನುಕೂಲ ಎಂಬ ವಿಷಯದ ಕುರಿತು (ಎರಡು ಪುಟಗಳಿಗೆ ಮೀರದಂತೆ) ಕನ್ನಡದಲ್ಲಿ ಪ್ರಬಂಧ ಸ್ಪರ್ಧೆ ಹಾಗೂ ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಕೋವಿಡ್-19 ಜಾಗತಿಕ ಮಟ್ಟದಲ್ಲಿ ಆರ್ಥಿಕತೆಯ ಮೇಲಿನ ದುಷ್ಪರಿಣಾಮ ಎಂಬ ವಿಷಯದ ಕುರಿತು (ಮೂರು ಪುಟಗಳಿಗೆ ಮೀರದಂತೆ) ಪ್ರಬಂಧ ಸ್ಪರ್ಧೆ ನಡೆಯಲಿದೆ.
ಆಸಕ್ತ ವಿದ್ಯಾರ್ಥಿಗಳು ತಮ್ಮ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆಯೊಂದಿಗೆ – ಚಿತ್ರಕಲೆ ಹಾಗೂ ಪ್ರಬಂಧದ ಸಾಫ್ಟ್ ಪ್ರತಿಗಳನ್ನು clccl.dplib.karshm@gmail.com ಇ-ಮೇಲ್ ಮೂಲಕ ಅಥವಾ ಖುದ್ದಾಗಿ ಮುಖ್ಯ ಗ್ರಂಥಾಲಯಾಧಿಕಾರಿಗಳ ಕಛೇರಿ, ನಗರ ಕೇಂದ್ರ ಗ್ರಂಥಾಲಯ, ಶಿವಮೊಗ್ಗ, ವಿಳಾಸಕ್ಕೆ ನವೆಂಬರ್ 20ರೊಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಛೇರಿ ಸಮಯದಲ್ಲಿ ಈ ಕಛೇರಿ ದೂರವಾಣಿ ಸಂಖ್ಯೆ: 08182-224905 ಗೆ ಸಂಪರ್ಕಿಸಬಹುದಾಗಿದೆ ಎಂದು ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿಗಳು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post