ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಖ್ಯಾತ ಪುರೋಹಿತರು, ಶುಭಮಂಗಳ ಶನೈಶ್ಚರ ದೇವಾಲಯದ ಪ್ರಧಾನ ಅರ್ಚಕರೂ ಹಾಗೂ ನಗರದ ಭಜನಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷರೂ ಆಗಿದ್ದ ವೇ.ಬ್ರ.ವಿನಾಯಕ ಬಾಯರಿ(47) ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.
ಇಂದು ಮುಂಜಾನೆ ಅವರು ಕೊನೆಯುಸಿರೆಳೆದಿದ್ದು, ಹೃದಯಾಘಾತ ಕಾರಣ ಎಂದು ಹೇಳಲಾಗಿದೆ.
Also Read>> ಪ್ರಯೋಗಗಳ ಮೂಲಕ ಕಲಿಯುವ ಕುತೂಹಲಕಾರಿ ವಿಷಯ ವಿಜ್ಞಾನ: ಫಾ. ಮೋನಿಸ್
ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಎಲ್’ಬಿಸ್ ನಗರದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಮಧ್ಯಾಹ್ನದ ವರೆಗೂ ವ್ಯವಸ್ಥೆ ಮಾಡಲಾಗಿದೆ.

ಕೀರ್ತಿಶೇಷ ಶ್ರೀ ಅ.ಪ. ರಾಮಭಟ್ಟರ ಪರಮಶಿಷ್ಯರಾಗಿದ್ದ ವಿನಾಯಕ ಬಾಯರಿ ಅವರು, ತಮ್ಮ ಗುರುಗಳ ಎರಡನೇ ವರ್ಷದ ಪುಣ್ಯತಿಥಿಯಂದೇ ನಿಧನರಾಗಿರುವುದು ವಿಪರ್ಯಾಸವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post