ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಹಿಂದೂ ಸಮಾಜದ ಯುವಕರನ್ನು ಮುಟ್ಟಿದರೆ ಮುಸ್ಲಿಂ ಗೂಂಡಾಗಳಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಿನ್ನೆ ಮುಸ್ಲಿಂ ಯುವಕರಿಂದ ಹಲ್ಲೆಗೊಳಗಾಗಿ ಮೆಟ್ರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಜರಂಗದಳದ ನಾಗೇಶ್ ಅವರ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಏನಾದರೂ ಆಗಲಿ ಎಂಬ ಮನಃಸ್ಥಿತಿಯ ಗೂಂಡಾಗಳು ಇವರು. ಹಿಂದೆ ಪಾಕಿಸ್ಥಾನ್ ಜಿಂದಾಬಾದ್ ಎಂದು ದೇಶದ್ರೋಹಿ ಘೋಷಣೆ ಕೂಗಿದ ಪಿಎಫ್’ಐ ಸಂಘಟನೆಯವರು ಕೂಗಿದ್ದ ಧೈರ್ಯ ಅವರಿಗೆ ಇತ್ತು. ಆದರೆ, ಅಂದು ಆ ರೀತಿ ಕೂಗುವ ಧೈರ್ಯ ರಾಜ್ಯದಲ್ಲಿ ಯಾರಿಗೂ ಇಲ್ಲ. ಇಂತಹ ಸಂದರ್ಭದಲ್ಲಿ ಮುಸ್ಲಿಂ ಚಿಲ್ಲರೆ ಗೂಂಡಾಗಳು ಮಾಡಿರುವ ದುಷ್ಕೃತ್ಯ ಇದಾಗಿದೆ ಎಂದರು.
ಇಂತಹ ಕೃತ್ಯಗಳನ್ನು ಮಾಡುವ ದುಷ್ಕರ್ಮಿಗಳನ್ನು ಹೇಗೆ ಮಟ್ಟ ಹಾಕಬೇಕು ಎಂದು ನಮಗೆ ತಿಳಿದಿದೆ. ಹಿಂದೂ ಯುವಕರನ್ನು ಮುಟ್ಟಿದರೆ ಮುಸ್ಲಿಂ ಗೂಂಡಾಗಳಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಇಂತಹವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post