ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಗರ: ಕನ್ನಡಿಗ ಸಿನಿಮಾ ಶೂಟಿಂಗ್’ಗಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸಾಗರಕ್ಕೆ ಆಗಮಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಸಾಗರದ ಸಮೀಪದ ಬೆಳ್ಳಣ್ಣೆಯ ಪುರಾತನ ಶಂಭು ಲಿಂಗೇಶ್ವರ ದೇವಾಲಯದ ಹಿಂಬದಿಯ ಶರಾವತಿ ಹಿನ್ನೀರಿನ ತಟದಲ್ಲಿ ಅತ್ಯದ್ಭುತ ಮನೆಯ ಸೆಟ್ ಒಂದನ್ನು ಹಾಕಲಾಗಿದ್ದು, ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಕನ್ನಡಿಗ ಚಿತ್ರದ ಶೂಟಿಂಗ್ ಎಂದು ಹೇಳಲಾಗಿದೆ.
ಮನೆಯ ಸೆಟ್ ಕಾರ್ಯ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದ್ದು, ನಾಳೆ ಅಥವಾ ನಾಡಿದ್ದು ಚಿತ್ರೀಕರಣಕ್ಕಾಗಿ ರವಿಚಂದ್ರನ್ ಆಗಮಿಸಲಿದ್ದಾರೆ ಎಂದು ವರದಿಯಾಗಿದ್ದರೂ, ಈ ಕುರಿತಂತೆ ಚಿತ್ರ ತಂಡವಾಗಲಿ, ಸ್ಥಳೀಯ ಅಧಿಕಾರಿಗಳಾಗಲೀ ಯಾವುದೇ ರೀತಿಯ ಅಧಿಕೃತ ಮಾಹಿತಿಯನ್ನು ಪ್ರಕಟಿಸಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















