ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಅಹಿತಕರ ಘಟನೆ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿರುವ ಸೆಕ್ಷನ್ 144 ಹಾಗೂ ಮೂರು ಠಾಣಾ ವ್ಯಾಪ್ತಿಯಲ್ಲಿರುವ ಕರ್ಫ್ಯೂ ಮುಂದುವರೆಸುವ ಅಥವಾ ಅಂತ್ಯ ಹಾಡುವ ಕುರಿತಾಗಿ ಐಜಿಪಿ ಅವರ ಜೊತೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಹೇಳಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಜಾರಿಯಲ್ಲಿರುವ ಸೆಕ್ಷನ್ ಹಾಗೂ ಕರ್ಫ್ಯೂ ನಾಳೆಗೆ ಅಂತ್ಯವಾಗಲಿದೆ. ಆದರೆ, ಇದನ್ನು ಹಂತ ಹಂತವಾಗಿ ಸಡಿಲಿಕೆ ಮಾಡುವ ಕುರಿತಾಗಿ ಚಿಂತನೆ ನಡೆಸಲಾಗಿದೆ. ನಾಳೆಯಿಂದ ಮತ್ತೆ ಮುಂದುವರೆಸಬೇಕಾ ಅಥವಾ ಅಂತ್ಯಗೊಳಿಸಬೇಕಾ ಎಂಬುದರ ಕುರಿತಾಗಿ ನಾಳೆ ಮುಂಜಾನೆ ಐಜಿಪಿ ಅವರ ಜೊತೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post