ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳುತ್ತಾರೆ. ಆದರೆ ಕಾಂಗ್ರೆಸ್ ನಾಯಕರು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ದೇಶದ ಎಲ್ಲ ಮುಸ್ಲಿಮರು ರಾಷ್ಟ್ರ ದ್ರೋಹಿಗಳಲ್ಲ. ಹಿಂದು- ಮುಸಲ್ಮಾನರನ್ನು ಕಾಂಗ್ರೆಸ್ ಬೇರೆ ಬೇರೆ ಮಾಡುತ್ತಿದೆ ಎಂದು ಕೆ.ಎಸ್.ಈಶ್ವರಪ್ಪ K.S. Eshwarappa ಹೇಳಿದರು.
ಇಂದು ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರ ತಂತ್ರಕ್ಕೆ ಪ್ರತಿತಂತ್ರವನ್ನು ಹೂಡಬೇಕು. ಕಾಂಗ್ರೆಸ್ನ ಮೇಕೆದಾಟು, ಜೆಡಿಎಸ್ನ ಜಲಧಾರೆ ಯಂತಹ ಯಾವುದೇ ಕಾರ್ಯಕ್ರಮಗಳು ಅವರಿಗೆ ಒಂದೇ ಒಂದು ವೋಟು ತರುವುದಿಲ್ಲ. ಮುಸ್ಲಿಮರನ್ನು ಕಂಡ ಕೂಡಲೇ ಅವರು ಪಾಕಿಸ್ತಾನದವರು, ಉಗ್ರಗಾಮಿಗಳು ಎಂಬ ಭಾವನೆಯನ್ನು ದೂರ ತಳ್ಳಿ. ಅವರನ್ನು ನಮ್ಮತ್ತ ಸೆಳೆಯುವಂತಹ ಪ್ರಯತ್ನ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
Also read: ಬಸ್ತಿಕೊಪ್ಪ ಗ್ರಾಮದಲ್ಲಿ ಭಾರಿ ಕಲ್ಲುಗಣಿಗಾರಿಕೆ: ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಒಗೆ ಮನವಿ
ಹುಬ್ಬಳ್ಳಿಯಲ್ಲಿ ನಡೆದ ಘಟನಯಿಂದ ಎಲ್ಲಾ ಮುಸ್ಲಿಮರನ್ನು ಅನುಮಾನದಿಂದ ನೋಡುವಂತಾಗಿದೆ. ಗಲಭೆಗೆ ಕಾರಣನಾದ ಮಾಸ್ಟರ್ ಮೈಂಡ್ ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದೆ. ಆದರೆ ಆತ ಜನರನ್ನು ಸೇರಿಸಿದ್ದು ಹೌದು. ಆದರೆ, ಕಲ್ಲು ಹೊಡೆಸಿದ್ದು ನಾನಲ್ಲ ಎಂದು ಹೇಳುತ್ತಿದ್ದಾನೆ. 2 ಸಾವಿರ ಜನರನ್ನು ಹೇಗೆ ಸೇರಿಸಿದ ಅವನಿಗೆ ಸ್ಫೂರ್ತಿ ಯಾರು ಎಂದು ಪ್ರಶ್ನಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post