ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎಪ್ರಿಲ್ 5ರಿಂದ ವಾಹನ ಸಂಚಾರಕ್ಕೆ ಮುಕ್ತವಾಗಬೇಕಿದ್ದ ಬಾಳೆಬರೆ ಘಾಟ್ ಅನಿವಾರ್ಯ ಕಾರಣಗಳಿಂದ ಮತ್ತೆ 15 ದಿನಗಳ ಕಾಲ ಬಂದ್ ಆಗಲಿದ್ದು, ಇದಕ್ಕೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ.
ಈ ಕುರಿತಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಬಾಳೇಬರೆ ಘಾಟಿಯಲ್ಲಿ 2570 ಮೀಟರ್ ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು ಎಪ್ರಿಲ್ 5 ರ ವರೆಗೆ ಬಾಳೇಬರೆ ಘಾಟಿಯನ್ನು ಬಂದ್ ಮಾಡಿ ಬದಲೀ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಕಾರಣಾಂತರದಿಂದ ಎಪ್ರಿಲ್ 15ರವರೆಗೆ ಘಾಟಿಯಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಿ ಕಾಮಗಾರಿ ಮುಂದುವರೆಸಲಾಗುತ್ತಿದೆ ಎಂದಿದ್ದಾರೆ.
ಅವಧಿ ವಿಸ್ತರಣೆಗೆ ಕಾಮಗಾರಿ ನಡೆಸುವ ಯಂತ್ರೋಪಕರಣಗಳು ಪದೇ ಪದೇ ದುರಸ್ತಿಗೆ ಬಂದ ಪರಿಣಾಮ ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಲು ಸಾಧ್ಯವಾಗಿಲ್ಲ. ಹಾಗಾಗಿ ಎಪ್ರಿಲ್ 15 ರವರೆಗೆ ಕಾಮಗಾರಿ ಅವಧಿಯನ್ನ ವಿಸ್ತರಿಸಲಾಗಿದೆ ಎಂದಿದ್ದಾರೆ.
ಬದಲಿ ಮಾರ್ಗ ಹೀಗಿದೆ:
ಈ ಮಾರ್ಗ ಮುಕ್ತಾಯವಾಗುವವರೆಗೂ ಹೊಸನಗರ-ಕುಂದಾಪುರ, ಸಾಗರ-ಕುಂದಾಪುರ ಹಾಗೂ ತೀರ್ಥಹಳ್ಳಿ ಕುಂದಾಪುರ ಮಾರ್ಗಕ್ಕೆ ಪರ್ಯಾಯ ರಸ್ತೆಗಳನ್ನು ಸೂಚಿಸಲಾಗಿದೆ.
ತೀರ್ಥಹಳ್ಳಿ, ಆಗುಂಬೆ, ಸೋಮೇಶ್ವರ, ಹಾಲಾಡಿ ಬಸ್ರೂರು ಮಾರ್ಗವಾಗಿ ಕುಂದಾಪುರಕ್ಕೆ ಲಘುವಾಹನಗಳು ಸಂಚರಿಸಬಹುದಾಗಿದ್ದು, ಭಾರಿ ವಾಹನಗಳು ತೀರ್ಥಹಳ್ಳಿ, ಕಾನುಗೋಡು, ನಗರ, ಕೊಲ್ಲೂರು, ಮೂಲಕ, ಹೊಸನಗರ ಮೂಲಕ ಕುಂದಾಪುರಕ್ಕೆ ಸಂಚರಿಸುವ ಲಘು ಅಥವಾ ಭಾರಿ ವಾಹನಗಳು ಹೊಸನಗರ, ನಗರ ಹಾಗೂ ಕೊಲ್ಲೂರು ರಸ್ತೆಯ ಮೂಲಕ ಕುಂದಾಪುರಕ್ಕೆ ಸಂಚರಿಸಬಹುದಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















