ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್.-4 ಮತ್ತು 5 ರಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆಗಸ್ಟ್ 22 ರಂದು ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ:
ನಗರದ ಸಾಗರ ಮುಖ್ಯರಸ್ತೆ, ಭಾರ್ಗವಿ ಪೆಟ್ರೊಲ್ ಬಂಕ್, ಆಲ್ಕೋಳ ಸರ್ಕಲ್, ಎಸ್.ಪಿ.ಕಚೇರಿ, ಪಂಪನಗರ, ಅಶೋಕನಗರ, ಎ.ಆರ್.ಬಿ.ಕಾಲೋನಿ, ಡಿ.ಎ.ಆರ್.ಮೈದಾನ, ಪೊಲೀಸ್ ಠಾಣೆ, ಸರ್ಕ್ಯೂಟ್ ಹೌಸ್, ಆಯನೂರು ಗೇಟ್, ಸಾಗರ ಮುಖ್ಯರಸ್ತೆ, ಎಲ್.ಐ.ಸಿ.ಆಫೀಸ್, ತೆರಿಗೆ ಕಚೇರಿ, ಗೋಪಾಳ ಮುಖ್ಯರಸ್ತೆ, ಮೋರ್ ಅಕ್ಕಪಕ್ಕ, ಗೋಪಾಳ ಎ ಯಿಂದ ಎಫ್ ಬ್ಲಾಕ್, ಆಲ್‌ಹರೀಮ್ ಲೇಔಟ್, 100 ಅಡಿರಸ್ತೆ, ಪೆಟ್ರೋಲ್ ಬಂಕ್, ವಾಣಿಜ್ಯ ತೆರಿಗೆ ಕಚೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಗ್ರಾಹಕರು ಸಹರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post