ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜುಲೈ 10ರಂದು ತ್ಯಾವರೆಚಟ್ನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ದುರಸ್ತಿ ಕಾರ್ಯ ಹಾಗೂ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಎಫ್-5ರಲ್ಲಿ ಸ್ಮಾರ್ಟ್‌ಸಿಟಿ ವತಿಯಿಂದ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ಕೇಂದ್ರದಿಂದ ಸರಬರಾಜಾಗುವ ಫೀಡರ್‌ಗಳಿಗೆ ಸಂಬಂಧಿಸಿದ ಈ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ
ನಗರ ವ್ಯಾಪ್ತಿಯ ಜೆಎನ್‌ಎನ್‌ಸಿ ಕಾಲೇಜು ಮುಂಭಾಗದ ಪ್ರದೇಶ, ಕುವೆಂಪು ಬಡಾವಣೆ, ರೆಡ್ಡಿ ಲೇಔಟ್, ಪರ್‍ಫೆಕ್ಟ್ ಅಲಾಯ್ಸ್, ಇಂಜಿನಿಯರಿಂಗ್ ಕಾಲೇಜು, ನವಿಲೆ, ಬೊಮ್ಮನಕಟ್ಟೆ (ಎ, ಬಿ, ಸಿ, ಡಿ, ಇ, ಎಫ್, ಜಿ, ಹೆಚ್ ಬ್ಲಾಕ್‌ಗಳು), ಕುವೆಂಪುನಗರ, ಜ್ಯೋತಿನಗರ, ಡಾಲರ್ಸ್ ಕಾಲೋನಿ, ಎಲ್‌ಬಿಎಸ್ ನಗರ, ಅಶ್ವಥ್ ನಗರ, ಬಸವೇಶ್ವರ ನಗರ, ಕೃಷಿನಗರ, ಕೀರ್ತಿನಗರ, ಪವನಶ್ರೀ ಲೇಔಟ್, ಶಾಂತಿನಗರ, ತ್ಯಾವರೆಚಟ್ನಹಳ್ಳಿ, ಸವಳಂಗ ರಸ್ತೆ, ಶಿವಬಸವನಗರ, ಶಂಕರಮಠ ರಸ್ತೆ(ವೆಹಿಕಲ್ ಶೋರೋಂ, ರೈಸ್‌ಮಿಲ್ಸ್ ಏರಿಯಾ), ಗುಂಡಪ್ಪ ಶೆಡ್, ಶೇಷಾದ್ರಿಪುರಂ ಹಾಗೂ ಸುತ್ತಮುತ್ತಲಿನ ಪ್ರದೇಶ.
ಎಲ್‌ಐಸಿ ಆಫೀಸ್, ತೆರಿಗೆ ಕಚೇರಿ, ಗೋಪಾಳ ಮುಖ್ಯ ರಸ್ತೆ, ಮೋರ್ ಅಕ್ಕಪಕ್ಕ, ಗೋಪಾಳ ಎ, ಬಿ, ಸಿ, ಡಿ, ಇ ಮತ್ತು ಎಫ್ ಬ್ಲಾಕ್, ಅಲ್‌ಹರೀಮ್ ಲೇಔಟ್, 100 ಅಡಿ ರಸ್ತೆ ಪೆಟ್ರೋಲ್ ಬಂಕ್, ವಾಣಿಜ್ಯ ತೆರಿಗೆ ಕಚೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ನಗರ ಉಪವಿಭಾಗ ೩ ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post