ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜಿಲ್ಲೆಯ ನಗರ ಉಪ ವಿಭಾಗ ವ್ಯಾಪ್ತಿ-೨ರ ವ್ಯಾಪ್ತಿಯಲ್ಲಿನ ಮಂಡ್ಲಿ ವಿ.ವಿ.ಕೇಂದ್ರಕ್ಕೆ ಸಂಬಂಧಪಟ್ಟಂತೆ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಭೂಗತ ಕೇಬಲ್ ಕಾಮಗಾರಿ ಇರುವ ಕಾರಣ ಜುಲೈ 7ರಂದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ:
ಪೀಯರ್ ಲೈಟ್, ಶಂಕರ್ ಐ ಆಸ್ಪತ್ರೆ, ಹಾಗನೂರು ರೂರಲ್, ಕಲ್ಲೂರು ಮಂಡ್ಲಿ, ಊರುಕಡೂರು, ರಾಮಿನಕೊಪ್ಪ, ಗೋಪಿಶೆಟ್ಟಿಕೊಪ್ಪ, ಇಲಿಯಾಸ್‌ನಗರ 1 ರಿಂದ 13ನೇ ತಿರುವು, ಗಂದರ್ವನಗರ, ಕೆ.ಹೆಚ್.ಬಿ.ಕಾಲೋನಿ, ಸಿದ್ದೇಶ್ವರ ಸರ್ಕಲ್ 100 ಅಡಿ ರಸ್ತೆ, ಮಂಡ್ಲಿ, ಎನ್.ಟಿ.ರಸ್ತೆ, ಮಾರ್‍ನಾಮಿಬೈಲು, ಬಿ.ಹೆಚ್.ರಸ್ತೆ, ಹಳೆಮಂಡ್ಲಿ, ಹರಕೆರೆ, ವಾದಿಹುದ, ಸೂಳೆಬೈಲು ಸುತ್ತಮುತ್ತ, ಕಲ್ಲೂರಮಂಡ್ಲಿ ಕೈಗಾರಿಕಾ ಪ್ರದೇಶ, ಕೃಷ್ಣರಾಜ ನೀರು ಶುದ್ಧಿಕರಣ ಘಟಕ, ಕುರುಬರಪಾಳ್ಯ, ಸಾವಯಿಪಾಳ್ಯ, ಮುರಾದ್‌ನಗರ, ಓ.ಟಿ.ರಸ್ತೆ, ಸಿಗೇಹಟ್ಟಿ, ಪಂಚವಟಿಕಾಲೋನಿ, ಬಿ.ಬಿ.ರಸ್ತೆ, ಕುಂಬಾರಕೇರಿ, ವಂದನ ಟಾಕೀಸ್ ಸುತ್ತಮುತ್ತ, ಆರ್.ಎಂ.ಎಲ್.ನಗರ 1ನೇ ಹಂತ ಮತ್ತು 2ನೇ ಹಂತ, ಎಲ್.ಎಲ್.ಆರ್.ರಸ್ತೆ, ಜೆ.ಸಿ.ನಗರ, ಎಲ್.ಎಲ್.ಬಿ.ರಸ್ತೆ, ದುರ್ಗಿಗುಡಿ, ನೆಹರು ರಸ್ತೆ ಎಡಭಾಗ, ಗಾರ್ಡ್‌ನ್ ಏರಿಯಾ, ಖಾಸಗಿ ಮತ್ತು ಸರ್ಕಾರಿ ಬಸ್‌ನಿಲ್ದಾಣ, ಆನಂದ್‌ರಾವ್ ಬಡಾವಣೆ, ಮಂಜುನಾಥ ಬಡಾವಣೆ, ಟಿಪ್ಪುನಗರ, ಮಿಳಘಟ್ಟ, ಅಣ್ಣಾನಗರ, ತಿಮ್ಮಪ್ಪನಕೊಪ್ಪಲು, ಕೆ.ಆರ್.ಪುರಂ, ಸಿದ್ದಯ್ಯರಸ್ತೆ, ಗಾಂಧಿಬಜಾರ್, ಕುಂಬರಗುಂಡಿ, ಉಪ್ಪಾರ್‌ಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಮೆಸ್ಕಾಂನ ನಗರ ಉಪವಿಭಾಗ-2ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post