ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಮೆಸ್ಕಾಂ ನಗರ ಉಪವಿಭಾಗವು ನಗರ ಉಪವಿಭಾಗ-2, ಘಟಕ-4ರ ವ್ಯಾಪ್ತಿಯಲ್ಲಿ ಜೂನ್ 9ರಂದು ಬೆಳಿಗ್ಗೆ 9ರಿಂದ ಸಂಜೆ ೬ರವರೆಗೆ ಸ್ಮಾರ್ಟ್‌ಸಿಟಿ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಕೋಟೆ ರಸ್ತೆ, ಓ.ಬಿ.ಎಲ್. ರಸ್ತೆ, ಪೆನ್ಶನ್ ಮೊಹಲ್ಲ, ಅಪ್ಪಾಜಿರಾವ್ ಕಾಂಪೌಂಡ್, ಸೈನ್ಸ್ ಫೀಲ್ಡ್, ಷಾಹಿ ಎಕ್ಸ್‌ಪರ್ಟ್ಸ್, ಎಂ.ಆರ್.ಎಸ್. ಎಫ್-1, ಬಿ.ಹೆಚ್.ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿಲ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಪ್ರದೇಶದ ವ್ಯಾಪ್ತಿಗೊಳಪಡುವ ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post