ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೆಸ್ಕಾಂ ಗ್ರಾಮೀಣ ಉಪವಿಭಾಗದ ಪಿಳ್ಳಂಗಿರಿ ಶಾಖಾ ವ್ಯಾಪ್ತಿಯ ಎಫ್-2 ಹೊಳೆಹೊನ್ನೂರು ಫೀಡರ್ ಮಾರ್ಗ, ಹೊಳಲೂರು ಮತ್ತು 110/11 ಕೆವಿ ವಿ.ವಿ.ಕೇಂದ್ರ, ಎಂಆರ್‍ಎಸ್ ಶಿವಮೊಗ್ಗ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ ಮಾರ್ಚ್ 10ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಹೊಳಲೂರು, ಮಡಿಕೆ ಚೀಲೂರು, ಹಾಡೋನಹಳ್ಳಿ, ಹೊಳೆಹಟ್ಟಿ, ಸೂಗೂರು, ಕ್ಯಾತಿನಕೊಪ್ಪ, ಬುಳ್ಳಾಪುರ, ಬೇಡರಹೊಸಳ್ಳಿ, ಹರಮಘಟ್ಟ, ಸೋಮಿನಕೊಪ್ಪ, ಆಲದಹಳ್ಳಿ, ಸುತ್ತುಕೋಟೆ, ಕೊಮ್ಮನಾಳ್, ಬಿಕ್ಕೋನಹಳ್ಳಿ, ಬೂದಿಗೆರೆ, ಬೀರನಕೆರೆ, ಬನ್ನಿಕೆರೆ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಮಾರ್ಚ್ 10 ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಕೂಡ್ಲಿ, ಚಿಕ್ಕೂಡ್ಲಿ, ಭದ್ರಾಪುರ, ಕಾಟಿಕೆರೆ, ವೆಂಕಟಾಪುರ, ಬುಕ್ಲಾಪುರ, ಹೊಳೆಬೆಳಗಲು, ಹೊಳೆಬೆನವಳ್ಳಿ, ದೊಡ್ಡತಾಂಡ, ಹೊಸಮನೆತಾಂಡ, ಪಿಳ್ಳಂಗಿರಿ, ಜಾವಳ್ಳಿ, ಹಾರೋಬೆನವಳ್ಳಿ, ಬೀರನಹಳ್ಳಿ, ಹೊಯ್ಸನಹಳ್ಳಿ, ಯಲವಟ್ಟಿ, ಹಸೂಡಿ, ಹಸೂಡಿ ಫಾರಂ, ವೀರಭದ್ರಕಾಲೋನಿ, ಹಕ್ಕಿಪಿಕ್ಕಿ ಕ್ಯಾಂಪ್, ಚಿಕ್ಕಮಟ್ಟಿ, ಅಬ್ಬರಘಟ್ಟ ಮತ್ತು ಸಂತೆಕಡೂರು ಗ್ರಾಮದ 66/11 ಕೆವಿ ವಿವಿ ಕೇಂದ್ರದ ಎಫ್-1,2,3 ರಲ್ಲಿ ಕುಡಿಯುವ ನೀರು ಮತ್ತು ಎಪ್4 ರಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸಂತೆಕಡೂರು, ಶ್ರೀರಾಮನಗರ, ರಾಂಪುರ, ಕೊರಲಹಳ್ಳಿ, ಕಾಚಿನಕಟ್ಟೆ, ಜ್ಯೂತಿನಗರ, ದೊಡ್ಡಿಬೀಳು, ವಿನಾಯಕನಗರ, ಲಕ್ಕಿನಕೊಪ್ಪ, ತೋಟದಕೆರೆ, ಹುರಳಿಹಳ್ಳಿ, ಗಣಿದಾಳು, ಉಂಬ್ಳೆಬೈಲು, ಕಣಗಲಸರ, ಮರಾಠಿ ಕ್ಯಾಂಪ್, ಸಾಲಿಗೆರೆ, ಕೈತೊಟ್ಟಲು, ಕಾಕನಹಸೂಡಿ, ಲಿಂಗಾಪುರ, ಸಿದ್ದಮಾಜಿ ಹೊಸರೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಈ ಪ್ರದೇಶದ ವ್ಯಾಪ್ತಿಯ ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.












Discussion about this post